ಕಲಬುರಗಿ: ಪುಂಡಪೋಕರಿಗಳಿಗೆ ತಕ್ಕ ಶಾಸ್ತಿ ಮಾಡುವುದಕ್ಕೆ ತಂಡವೊಂದು ಹುಟ್ಟಿಕೊಂಡಿತ್ತು. ಬೀದಿ ಕಾಮಣ್ಣರ ಕಾಟದಿಂದ ಪೊಲೀಸ್ ಇಲಾಖೆ ಪ್ರತ್ಯೇಕ ಸೆಲ್ ಓಪನ್ ಮಾಡಿತ್ತು. ಆದರೆ ಆರಂಭದಲ್ಲಿ ಅಬ್ಬರಿಸಿದ್ದ ಆ ಟೀಂ ಇದೀಗ ಸೈಲೆಂಟ್ ಆಗಿದೆ.
ಸಿಟಿ ಪೊಲೀಸ್ ಕಮಾಂಡೋ ಸೆಂಟರ್ ಕಲಬುರಗಿ ನಗರದಲ್ಲಿ ಇತ್ತೀಚೆಗೆ ಓಪನ್ ಆಗಿದೆ. ಪೊಲೀಸ್ ಇಲಾಖೆ ಜಾರಿಗೆ ತಂದಿದ್ದ ಸಿಟಿ ಪೊಲೀಸ್ ಕಮಾಂಡ್ ಸೆಂಟರ್ ಯೋಜನೆಯನ್ನು ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಜೊತೆಗೆ ಕಮಾಂಡ್ ಸೆಂಟರ್‍ನಲ್ಲಿ ಕೆಲಸ ಮಾಡುವ ವಿಶೇಷ ಪಡೆಗೆ ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಅಂತ ಸೂಚನೆ ಸಹ ನೀಡಿದರು. ಈ ಯೋಜನೆ 1 ವಾರ ನಗರದ ಕೆಲ ಪುಡಿ ರೌಡಿಗಳಿಗೆ ನಡುಕ ಹುಟ್ಟಿಸಿತ್ತು. ನಗರದಲ್ಲಿ ಎಲ್ಲವೂ ಸರಿಯಾಗಿಯೇ ನಡೆದುಕೊಂಡು ಹೋಗುತ್ತಿದೆ ಎನ್ನುವಷ್ಟರಲ್ಲಿ ಕಮಾಂಡ್ ಸೆಂಟರ್‍ನ ವಿಶೇಷ ಪಡೆ ಇದೀಗ ಸೈಲೆಂಟ್ ಆಗಿ ಮೂಲೆ ಗುಂಪಾಗಿದೆ.
Advertisement
Advertisement
ನಗರದ 14 ಪೊಲೀಸ್ ಠಾಣೆಗಳ ಪೈಕಿ ಮಹಿಳಾ ಪೇದೆ ಸೇರಿ ಆಯ್ದ ಸಿಬ್ಬಂದಿಯನ್ನು ಪೊಲೀಸ್ ಕಮಾಂಡೋ ಸೆಂಟರ್ ಗೆ ನಿಯೋಜಿಸಲಾಗಿತ್ತು. ಇದಕ್ಕಾಗಿ ವಿಶೇಷ ಬೈಕ್ ಕೊಟ್ಟು ಬೀದಿ ಕಾಮಣ್ಣರನ್ನು ಹಾಗೂ ಸರಗಳ್ಳರನ್ನು ಬೆನ್ನತ್ತಿ ಹಿಡಿದು ಬುದ್ಧಿ ಕಲಿಸುವಂತಹ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿತ್ತು. ಆದರೆ ಅದೇ ಸಿಬ್ಬಂದಿ ಈಗ ವಾಪಸ್ ತಮ್ಮ ಠಾಣೆಗೆ ಮರಳಿದ್ದು ಸಿಟಿ ಕಮಾಂಡ್ ಸೆಂಟರ್ ಶಟ್‍ಡೌನ್ ಆಗುವ ಹಂತಕ್ಕೆ ಬಂದಿದೆ.
Advertisement
ಈ ಬಗ್ಗೆ ಕಲಬುರಗಿ ಎಸ್‍ಪಿಯನ್ನು ಕೇಳಿದರೆ ಕಮಾಂಡ್ ಸೆಂಟರ್ ಟೆಕ್ನಿಕಲ್ ಅಪ್‍ಗ್ರಡ್ ಮಾಡಲಾಗ್ತಿದೆ. ನಗರದ ಬಹುತೇಕ ಕಡೆ ಒಂದೂವರೆ ಕೋಟಿ ವೆಚ್ಚದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳುತ್ತಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv