ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಒಂದು ವಾರಗಳಿಂದ ಅಲ್ಲಿಯೇ ಚಿತ್ರತಂಡ ಬೀಡು ಬಿಟ್ಟಿದೆ. ಈಗಾಗಲೇ ಒಂದು ವಾರದ ಶೂಟಿಂಗ್ ನಡೆದಿದ್ದು, ಚಿತ್ರೀಕರಣದಲ್ಲಿ ನಟ ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಇನ್ನೂ ಶೂಟಿಂಗ್ ಅಲ್ಲಿಯೇ ಮುಂದುವರೆದಿದ್ದು, ಇದೀಗ ಚಿತ್ರೀಕರಣದ ಸ್ಥಳದಲ್ಲಿ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕಾಣಿಸಿಕೊಂಡಿದ್ದಾರೆ.
Advertisement
ಹೊಯ್ಸಳ ಸಿನಿಮಾ ಸೆಟ್ ನಲ್ಲಿ ವೇದ ಕೃಷ್ಣಮೂರ್ತಿ ಇರುವ ಫೋಟೋವನ್ನು ಸ್ವತಃ ಡಾಲಿ ಧನಂಜಯ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರು ಯಾಕೆ ಅಲ್ಲಿಗೆ ಬಂದರು? ಸುಮ್ನೆ ಶೂಟಿಂಗ್ ವೀಕ್ಷಿಸಲು ಬಂದಿದ್ದಾರಾ? ಅಥವಾ ಈ ಸಿನಿಮಾದಲ್ಲಿ ಅವರು ಪಾತ್ರ ಮಾಡಲಿದ್ದಾರೆ ಎನ್ನುವುದನ್ನು ಅವರು ಬಹಿರಂಗ ಪಡಿಸಿಲ್ಲ. ಆದರೆ, ವೇದಾ ಅವರು ಶೂಟಿಂಗ್ ಸ್ಥಳದಲ್ಲಿ ಕಾಣಿಸಿಕೊಂಡಿದ್ದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ
Advertisement
Advertisement
ವೇದಾ ಕೃಷ್ಣಮೂರ್ತಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದವರ ಜೊತೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದರು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಅಲ್ಲದೇ ಸಿನಿಮಾ ಸಂಬಂಧಿ ಅವರು ಅನೇಕ ಟ್ವಿಟ್ ಗಳನ್ನು ಕೂಡ ಮಾಡುತ್ತಲೇ ಇರುತ್ತಾರೆ. ಈ ಬಾರಿ ಹೊಯ್ಸಳ ಟೀಮ್ ಜೊತೆ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.