ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 137 ರನ್‍ಗಳ ಗೆಲುವು ಸಾಧಿಸಿದೆ.
ಮೆಲ್ಬೋರ್ನ್ ಟೆಸ್ಟ್ ನಲ್ಲಿ ಭಾರತಕ್ಕೆ ಗೆಲುವಿನಂಚಿನಲ್ಲಿ ಮಳೆರಾಯ ಕೈಕೊಟ್ಟಿದ್ದನು. ಕೊನೆಯ ದಿನವಾದ ಇಂದು ಮಳೆಯಿಂದಾಗಿ ಪಂದ್ಯ ಆರಂಭದಲ್ಲಿ ವಿಳಂಬವಾದರೂ ಸಹ ಭಾರತ 137 ರನ್‍ಗಳಿಂದ ಗೆಲುವಿನ ಕೇಕೆ ಹಾಕಿದೆ.
Advertisement
Advertisement
399 ರನ್‍ಗಳ ಅಸಾಧ್ಯ ಗೆಲುವಿನ ಗುರಿ ಬೆನ್ನಟ್ಟಿದ ಆಸೀಸ್, 261 ರನ್‍ಗಳಿಗೆ ಸರ್ವ ಪತನವಾಯಿತು. 4ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸುವಾಗ ಸ್ವಲ್ಪ ಹೊತ್ತು ಕಾಡಿದ ವರುಣ, 4 ರನ್ ಗಳಿಸುವಷ್ಟರಲ್ಲೇ ಆಸೀಸ್ ಸರ್ವಪತನ ಕಂಡಿತು.
Advertisement
3rd Test. It's all over! India win by 137 runs https://t.co/xZXZnUNaTU #AusvInd
— BCCI (@BCCI) December 30, 2018
Advertisement
ಕಡೆ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯ ಪರ ಪ್ಯಾಟ್ ಕಮಿನ್ಸ್ 63 ಹಾಗೂ ನಾಥನ್ ಲಿಯೋನ್ 7 ಗಳಿಸಿದರು. ಭಾರತದ ಪರ ಬೂಮ್ರಾ, ಜಡೇಜಾಗೆ ತಲಾ 3 ವಿಕೆಟ್, ಶಮಿ ಹಾಗೂ ಶರ್ಮಾಗೆ ತಲಾ 2 ವಿಕೆಟ್ ಪಡೆದಿದ್ದಾರೆ.
4 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಜಸ್ಪ್ರೀತ್ ಬೂಮ್ರಾ ಪಂದ್ಯ ಶ್ರೇಷ್ಠರಾಗಿದ್ದಾರೆ.
ಟೀಮ್ ಇಂಡಿಯಾ ಐತಿಹಾಸಿಕ ಗೆಲುವು, ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 137 ರನ್ ಅಂತರದ ವಿಜಯಕ್ಕೆ ಅಭಿನಂದನೆಗಳು. ????????
#Congratulations #TeamIndia ???????? A special win at The MCG. #INDvAUS pic.twitter.com/xYOZdlxx0a
— Laxman B. Nimbargi, IPS (@DCPWestBCP) December 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv