ಲೌಡರ್ ಹಿಲ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲೂ ಟೀಂ ಇಂಡಿಯಾ 22 ರನ್‍ಗಳಿಂದ ಜಯಭೇರಿ ಬಾರಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 15.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದ್ದ ವೇಳೆ ಮಳೆ ಸುರಿದಿದೆ. ಡಕ್ವರ್ತ್ ಲೂವಿಸ್ ನಿಯಮದ ಪ್ರಕಾರ 15.3 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ 120 ರನ್ ಗಳಿಸಬೇಕಿತ್ತು. ಮಳೆ ಹಿನ್ನೆಲೆಯಲ್ಲಿ ಪಂದ್ಯ ರದ್ದುಗೊಂಡಿದ್ದರಿಂದ 22 ರನ್‍ಗಳಿಂದ ಭಾರತ ಗೆಲುವು ಸಾಧಿಸಿತು.
Advertisement
Play has been called off due to rain. We win by 22 runs (DLS) and take an unassailable lead of 2-0 in the three match T20I series.#WIvIND pic.twitter.com/ijcicFwsq3
— BCCI (@BCCI) August 4, 2019
Advertisement
ಭಾರತ ಪರ ರೋಹಿತ್ ಶರ್ಮಾ 67(51), ಶಿಖರ್ ಧವನ್ 23(16), ಕೊಹ್ಲಿ 28 (23) ರನ್‍ಗಳಿಸಿದ್ರು. 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ರೋಹಿತ್ ಶರ್ಮಾ ಟಿ-20 ಕ್ರಿಕೆಟ್‍ನಲ್ಲಿ 21 ಅರ್ಧಶತಕಗಳನ್ನು ಪೂರೈಸಿ ಬ್ಯಾಟ್ಸ್ ಮನ್‍ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 105 ಸಿಕ್ಸರ್ ಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದ ಕ್ರಿಸ್‍ಗೇಲ್ ದಾಖಲೆಯನ್ನು ಅಳಿಸಿ ಹಾಕಿದರು.
Advertisement
Two wickets in an over for @krunalpandya24 ????????
Pooran and Powell depart, West Indies 89/4 after 14 overs.#WIvIND pic.twitter.com/qEnHXqGe7d
— BCCI (@BCCI) August 4, 2019
Advertisement
ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಸಿಂಗಲ್ ನಂಬರ್ ನಲ್ಲಿ ಔಟ್ ಆಗಿದ್ದರಿಂದ ಹಿನ್ನಡೆ ಅನುಭವಿಸಿತು. ಸುನಿಲ್ ನರೈನ್ (4) ಮತ್ತು ಎವಿನ್ ಲೆವಿಸ್ (0) ಬಹುಬೇಗನೇ ವಿಕೆಟ್ ಒಪ್ಪಿಸಿದರು. ತಂಡ ಹಿನ್ನಡೆಗೊಳಗಾಗುತ್ತಿದ್ದಂತೆ ನಿಕೋಲಕ್ ಮತ್ತು ರೋವ್‍ಮ್ಯಾನ್ ಪೊವಲ್ ಜೊತೆಯಾಗಿ ಎಚ್ಚರಿಕೆಯ ಆಟ ಆಡಿದರು. ಈ ಜೋಡಿ 37 ಎಸೆತಗಳಲ್ಲಿ ಅರ್ಧ ಶತಕವನ್ನು ತಂಡಕ್ಕೆ ನೀಡಿತು. ಪೊವೆಲ್ 20 ಎಸೆತಗಳಲ್ಲಿ ಅರ್ಧ ಶತಕದ ಮೂಲಕ ಅಬ್ಬರಿಸಿದರು. ಅರ್ಧಶತಕದ ಬಳಿಕ ಕೃಣಾಲ್ ಪಾಂಡ್ಯರ ಬೌಲಿಂಗ್ ನಲ್ಲಿ ಪೊವೆಲ್ ಚೆಂಡನ್ನು ಬೌಂಡರಿಗೆ ಅಟ್ಟಿದ್ದರು. ಈ ವೇಳೆ ಬೌಂಡರಿ ಗೆರೆಯ ಬಳಿ ಕ್ಯಾಚ್ ಹಿಡಿದ ಮನೀಶ್ ಪಾಂಡೆ ತಂಡಕ್ಕೆ ತಿರುವು ನೀಡಿದರು. 34 ಎಸೆತಗಳಲ್ಲಿ 54 ರನ್ ಗಳಿಸಿದ ಪೊವೆಲ್ ನಿರ್ಗಮಿಸಿದರು. ಭಾರತದ ಪರ ಕೃಣಾಲ್ ಪಾಂಡ್ಯ 2, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
Bhuvi and Sundar strike early on. West Indies 9/2 after 4 overs.
Live – https://t.co/ncZaVLuHvs #WIvIND pic.twitter.com/4PwzdAZR0R
— BCCI (@BCCI) August 4, 2019
Innings Break!#TeamIndia post a total of 167/5. Will the bowlers defend this or will the West Indies chase this down?
We will be back soon, stay tuned! pic.twitter.com/6OyK8GQkah
— BCCI (@BCCI) August 4, 2019
Captain @imVkohli calls it right at the toss. Elects to bat first against West Indies.#WIvIND pic.twitter.com/k5ilaNTU5V
— BCCI (@BCCI) August 4, 2019