– ಟಿ20 ಪಂದ್ಯದಲ್ಲಿ ಮಿಂಚಿದ ನಮನ್ ಓಜಾ-ವೆಂಕಟೇಶ್ ಪ್ರಸಾದ್
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ʻವಸುಧೈವ ಕುಟುಂಬಕಂʼ ತತ್ವದಡಿ ನಡೆದ ʻಒಂದು ಜಗತ್ತು-ಒಂದು ಕುಟುಂಬʼ ಕಪ್‌ನ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ ಗೆದ್ದು ಬೀಗಿದೆ.
ಯುವಮಾನವತವಾದಿ ಶ್ರೀ ಸದ್ಗುರು ಮಧುಸೂದನಸಾಯಿ ಆಯೋಜನೆ ಮಾಡಿದ್ದ ʻಒನ್ ವರ್ಲ್ಡ್-ಒನ್ ಫ್ಯಾಮಿಲಿʼ ಕಪ್‌ಗಾಗಿ ಭಾರತ (Team India) ಹಾಗೂ ಶ್ರೀಲಂಕಾ ನಿವೃತ್ತ ಕ್ರಿಕೆಟ್ ಆಟಗಾರರು ಈ ಪಂದ್ಯದಲ್ಲಿ ಸೆಣಸಾಟ ನಡೆಸಿದ್ರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್ ಗುಡ್‌ಬೈ
ಭಾರತ ತಂಡದಲ್ಲಿ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ನಮನ್ ಒಜಾ, ಎಸ್.ಬದ್ರೀನಾಥ್, ಅಶೋಕ್ ದಿಂಡಾ, ಪಿಯೂಷ್ ಚಾವ್ಲಾ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಷಿ, ಪಾಥೀವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಭಾಗವಹಿಸಿದ್ದರು.
ಇನ್ನೂ ಶ್ರೀಲಂಕಾ ತಂಡದಿಂದ ನಾಯಕ ಮಾರ್ವಿನ್ ಅಟಪಟ್ಟು, ಉಪಲ್ ತರಂಗ, ರೋಮೇಶ್, ಮಿಲಿಂಡಾ, ಅಸೆಲಾ, ಅರವಿಂದ ಡಿ ಸಿಲ್ವಾ, ನೂವಾನ್, ಅಜೆಂತಾ ಮೆಂಡಿಸ್, ತಿಲಾನ್, ಮುತ್ತಯ್ಯ ಮುರಳೀಧರನ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ಟೀಂ ಇಂಡಿಯಾದ ಆಲ್‌ರೌಂಡರ್ ಆಟ – ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ಯೂಸೂಫ್ ಪಠಾಣ್ 32 ಎಸೆತಗಳಲ್ಲಿ ಸ್ಫೋಟಕ 61 ರನ್ ಗಳಿಸಿದ್ದು, ನಮನ್ ಒಜಾ 27 ಎಸೆತಗಳಲ್ಲಿ 53 ರನ್ ಚಚ್ಚಿದರು. ಇನ್ನೂ 196 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 189 ರನ್ ಗಳಿಸಿ ವಿರೋಚಿತ ಸೋಲು ಕಂಡಿತು.
ಲಂಕಾ ತಂಡ ಉತ್ತಮ ಆರಂಭ ಪಡೆದರು ಬಳಿಕ ಟೀಂ ಇಂಡಿಯಾ ವೇಗಿಗಳ ಆರ್ಭಟಕ್ಕೆ ಸಿಲುಕಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: 10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ