ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, 150ನೇ ಟೆಸ್ಟ್ ಗೆದ್ದ ವಿಶ್ವದ 5ನೇ ದೇಶವಾಗಿ ಹೊರ ಹೊಮ್ಮಿದೆ. ಈ ವರ್ಷ ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಗೆದ್ದ ನಾಲ್ಕನೇ ಪಂದ್ಯ ಇದಾಗಿದೆ.
ಆಸ್ಟ್ರೇಲಿಯಾ 384, ಇಂಗ್ಲೆಂಡ್ 364, ವೆಸ್ಸ್ ಇಂಡೀಸ್ 171 ಮತ್ತು ದಕ್ಷಿಣ ಆಫ್ರಿಕಾ 162 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಇಂದಿನ ಪಂದ್ಯ ಜಯಿಸುವ ಮೂಲಕ ಟೀಂ ಇಂಡಿಯಾ 150ನೇ ಬಾರಿ ವಿಜಯ ಪತಾಕೆ ಹಾರಿಸುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ.
1932ರಿಂದ ಭಾರತ ಇದೂವರೆಗೂ 532 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 150 ಗೆಲುವು, 165 ಸೋಲು ಮತ್ತು 216 ಡ್ರಾ ಮಾಡಿಕೊಂಡಿದ್ದರೆ, ಒಂದು ಪಂದ್ಯ ಟೈಯಲ್ಲಿ ಅಂತ್ಯವಾಗಿದೆ. 562ರಲ್ಲಿ ವಿದೇಶಿ ನೆಲದಲ್ಲಿ 265 ಟೆಸ್ಟ್ ಆಡಿದೆ. ವಿದೇಶದಲ್ಲಿ ಆಡಿದ ಟೆಸ್ಟ್ ಪಂದ್ಯಗಳ ಪೈಕಿ 49ರಲ್ಲಿ ಗೆಲುವು ಸಾಧಿಸಿದ್ರೆ, 113ರಲ್ಲಿ ಸೋಲು ಕಂಡಿತ್ತು. 103 ಪಂದ್ಯಗಳು ಟೀಂ ಇಂಡಿಯಾ ಡ್ರಾ ಮಾಡಿಕೊಂಡಿದೆ. ಇದನ್ನೂ ಓದಿ: ಗಂಗೂಲಿ ದಾಖಲೆ ಟೈ, ಧೋನಿಗೆ ಸಮನಾಗಲು ಕೊಹ್ಲಿಗೆ ಬೇಕು 1 ಗೆಲುವು!
50 ವರ್ಷಗಳ ನಂತರ ಟೀಂ ಇಂಡಿಯಾ ವಿದೇಶದಲ್ಲಿ ಒಂದೇ ವರ್ಷ ನಾಲ್ಕು ಟೆಸ್ಟ್ ಗಳಲ್ಲಿ ಗೆಲುವು ಕಾಣುವ ಮೂಲಕ ದಾಖಲೆ ಬರೆದಿದೆ. ದಕ್ಷಿಣ ಆಫ್ರಿಕಾದ ಜೋಹನೆಸ್ ಬರ್ಗ್, ಇಂಗ್ಲೆಂಡ್ ನ ಟ್ರೆಂಟಬ್ರಿಜಾ, ಆಸ್ಟ್ರೇಲಿಯಾದ ಅಡಿಲೇಡ್ ಮತ್ತು ಮೆಲ್ಬೊರ್ನ್ ನಲ್ಲಿ ಟೀಂ ಇಂಡಿಯಾ ಗೆದ್ದಿದೆ. ಈ ಹಿಂದೆ 1968ರಲ್ಲಿ ಟೀಂ ಇಂಡಿಯಾ ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದಾದ 50 ವರ್ಷದ ಬಳಿಕ ಅಂದ್ರೆ 2018ರಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಲವು ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 150ನೇ ಟೆಸ್ಟ್ ಗೆಲುವು – ಕೀಪರ್ ರಿಷಭ್, ಇಶಾಂತ್ ಶರ್ಮಾ, ಬೂಮ್ರಾ ದಾಖಲೆ!
2000ನೇ ಇಸವಿಯಿಂದ ಇಂದಿನವರೆಗೂ ಟೀಂ ಇಂಡಿಯಾ 202 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 89ರಲ್ಲಿ ಗೆಲುವು, 56ರಲ್ಲಿ ಸೋಲು, 57 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 1952ರಲ್ಲಿ ಭಾರತ ತನ್ನ 25ನೇ ಟೆಸ್ಟ್ ನಲ್ಲಿ ಮೊದಲು ಗೆಲುವು ದಾಖಲಿಸಿತ್ತು. 1994ರಲ್ಲಿ 286ನೇ ಟೆಸ್ಟ್ ಪಂದ್ಯದಲ್ಲಿ 50ನೇ ಗೆಲುವನ್ನು ದಾಖಲಿಸಿತು. 27ನೇ ನವೆಂಬರ್ 2009ರಲ್ಲಿ ಆಡಿದ 432ನೇ ಮ್ಯಾಚ್ ನಲ್ಲಿ 100ನೇ ಗೆಲುವು ಪಡೆದಿತ್ತು. ಇಂದು ಆಸ್ಟೇಲಿಯಾ ವಿರುದ್ಧದ ಪಂದ್ಯದಲ್ಲಿ 150ನೇ ಗೆಲುವನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ. ಟೀಂ ಇಂಡಿಯಾ ಈ ವರ್ಷ ಅಂದ್ರೆ 2018ರಲ್ಲಿ ಒಟ್ಟು 48 ಪಂದ್ಯಗಳನ್ನು ಆಡಿದ್ದು, 5 ಟೆಸ್ಟ್ ಗಳನ್ನು ಡ್ರಾ ಮಾಡಿಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv