ಮಂಗಳೂರು: ಟೀಂ ಇಂಡಿಯಾದ ಟಿ20 ತಂಡದ ನಾಯಕ ಸೂರ್ಯ ಕುಮಾರ್ ಯಾದವ್ (Surya Kumar yadav) ಅವರು ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಭೇಟಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಬಳಿಕ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಸೂರ್ಯ ಕುಮಾರ್ ಯಾದವ್ ಆಶ್ಲೇಷ ಬಲಿ ಪೂಜೆ ,ಮಹಾಪೂಜೆ ಅಭಿಷೇಕವನ್ನು ನೆರವೇರಿಸಿದರು. ದೇವಸ್ಥಾನದ ವತಿಯಿಂದ ಯಾದವ್ ದಂಪತಿಗೆ ಗೌರವ ಸಮರ್ಪಿಸಲಾಯಿತು.
ಈ ಹಿಂದೆ ಜುಲೈನಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ:IPL Mega Auction 2025: ಹರಾಜಲ್ಲಿ 13ರ ಬಾಲಕ!
ನ.15 ರಂದು ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯ ನಡೆದಿತ್ತು. ದಾಖಲೆಯ 135 ರನ್‌ಗಳ ಜಯದೊಂದಿಗೆ 4 ಪಂದ್ಯಗಳ ಟಿ 20 (T20) ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದುಕೊಂಡಿತ್ತು.