– ತವರಿನಲ್ಲಿ ವಿಜಯೋತ್ಸವಕ್ಕೆ ಕೊಂಚ ತಡೆ
ಬಾರ್ಬಡೋಸ್: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ ತವರಿನಲ್ಲಿ ಭರ್ಜರಿ ಸ್ವಾಗತ ನೀಡಲು ತಯಾರಿಗಳು ನಡೆದಿವೆ. ಆದ್ರೆ, ಅಭಿಮಾನಿಗಳ ಆಸೆಗೆ ಬಾರ್ಬಡೋಸ್‌ಗೆ ಅಪ್ಪಳಿಸಿದ ಭೀಕರ ಚಂಡಮಾರುತ ತಣ್ಣೀರು ಎರಚಿದೆ. ಹಾಗಾಗಿ ಟೀಂ ಇಂಡಿಯಾ (Team India) ತವರಿನಲ್ಲಿ ವಿಜಯೋತ್ಸವ ಆಚರಿಸಲು ಇನ್ನೂ ಮೂರ್ನಾಲ್ಕು ದಿನ ಕಾಯಬೇಕಿದೆ.
Advertisement
ಕೆರೀಬಿಯನ್ ದ್ವೀಪಗಳಲ್ಲಿ ಸೋಮವಾರ (ಜು.1) ಬೆಳಗ್ಗಿನ ಜಾವದಲ್ಲಿ ಕೆಟಗಿರಿ-4 ಚಂಡಮಾರುತ ಬೀಸುತ್ತಿರುವುದರಿಂದ ವಿಮಾನಯಾನವೂ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸದ್ಯಕ್ಕೆ ಸೇವೆ ಸ್ಥಗಿತಗೊಳಿಸಲಾಗಿದೆ.
Advertisement
ಬಾರ್ಬಡೋಸ್ (Barbados) ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಬಿರುಗಾಳಿಯ ತೀವ್ರತೆಯೂ ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿದೆ. 3 ಲಕ್ಷ ಜನಸಂಖ್ಯೆ ಹೊಂದಿರುವ ದ್ವೀಪದಲ್ಲಿ ಭಾನುವಾರ ಸಂಜೆಯಿಂದಲೇ ಲಾಕ್‌ಡೌನ್ ವಿಧಿಸಲಾಗಿದೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ಬಾರ್ಬಡೋಸ್‌ನ ಹೋಟೆಲ್‌ಗೆ ಸೀಮಿತ ಆಗಿದ್ದಾರೆ. ಅವರು ಸ್ವದೇಶಕ್ಕೆ ವಾಪಸ್ ಆಗೋದು ಇನ್ನೂ ಮೂರು ದಿನ ತಡವಾಗಬಹುದು ಎಂದು ಹೇಳಲಾಗಿದೆ.
Advertisement
Advertisement
ಇನ್ನೂ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಯ್ ಶಾ (Jay Shah), ನಾವಿಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಮೊದಲಿಗೆ ಆಟಗಾರರು ಮತ್ತಿತರರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ. ಸ್ವದೇಶಕ್ಕೆ ಹೋದ ನಂತರ ಸನ್ಮಾನದ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೇರಿಕ ಅಧ್ಯಕ್ಷೀಯ ಚುನಾವಣೆ: ಬೈಡನ್, ಟ್ರಂಪ್ ಮುಖಾಮುಖಿ ಚರ್ಚೆ
ಸ್ವದೇಶಕ್ಕೆ ಆಗಮಿಸಿದ ನಂತರ ಮುಂಬೈ ಏರ್‌ಪೋರ್ಟ್‌ನಿಂದ ಬಿಸಿಸಿಐ ಕಚೇರಿವರೆಗೆ ಮೆರವಣಿಗೆ ನಡೆಸಲು ಬಿಸಿಸಿಐ ಆಲೋಚಿಸಿದೆ. ಇತ್ತ, ಸಂಸತ್‌ನ ಉಭಯ ಸದನಗಳಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಲಾಗಿದೆ. ಇದನ್ನೂ ಓದಿ: ಲಂಕಾ ನೌಕಾಪಡೆಯ ನಾವಿಕ ಸಾವು – ಭಾರತೀಯ ಮೀನುಗಾರರ ಮೇಲೆ ಹತ್ಯೆ ಆರೋಪ