ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಫಾರ್ಮ್ ಅಕ್ಷರಶಃ ಆಸ್ಟ್ರೇಲಿಯನ್ನರ ನಿದ್ದೆ ಗೆಡಿಸಿದೆ. ಟೂರ್ನಿ ಉದ್ದಕ್ಕೂ 3 ವಿಭಾಗಗಳಲ್ಲೂ ತಂಡದ ಪ್ರದರ್ಶನ ಅದ್ಭುತವಾಗಿದ್ದು, ಇದೇ ಸುದ್ದಿ ಸದ್ಯ ಆಸೀಸ್ ಪ್ಲೇಯರ್ಸ್‌ಗಳ ಹೃದಯ ಬಡಿತವನ್ನು ಹೆಚ್ಚಿಸಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದಾದರೂ ಒಂದು ತಂಡ ಅಜೇಯ ಓಟದ ಜೊತೆಗೆ ತಂಡದ ಆಟಗಾರರ ಕನ್ಸಿಟೆನ್ಸಿ ಮೇಂಟೈನ್ ಮಾಡ್ತಿದೆ ಅಂದ್ರೆ ಅದು ಭಾರತ ತಂಡದ ಆಟಗಾರರು ಮಾತ್ರ. ಟೂರ್ನಿ ಆರಂಭದಿಂದಲೂ ಭರ್ಜರಿ ಫಾರ್ಮ್ನಲ್ಲಿರೋ ಪ್ಲೇಯರ್ಸ್, ಫೈನಲ್ ವರೆಗೂ ತಮ್ಮ ಫಾರ್ಮ್ ಅನ್ನು ಭರ್ಜರಿಯಾಗಿ ಕಾಪಾಡಿಕೊಂಡಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಫೈನಲ್ ಗೆಲ್ಲೋ ಕಾನ್ಪಿಡೆನ್ಸ್ ಹೆಚ್ಚಿಸಿದ್ರೆ, ಇತ್ತ ಆಸ್ಟ್ರೇಲಿಯನ್ನರ ಟೆನ್ಷನ್ ಕೂಡ ಕಾರಣ ಆಗ್ತಿದೆ.
Advertisement
Advertisement
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಅಬ್ಬರ, ಜೊತೆಗೆ ಬೌಲರ್‌ಗಳ ಮಿಂಚಿನ ಪ್ರದರ್ಶನ ಆಸ್ಟ್ರೇಲಿಯಾ ಆಟಗಾರರನ್ನು ನಿದ್ದೆಯಲ್ಲೂ ಕಾಡುವಂತೆ ಮಾಡಿದೆ. ಕಾರಣ ಸೆಮಿ ಫೈನಲ್‌ನಲ್ಲಿನ ಬ್ಯಾಟರ್‌ಗಳ ಪ್ರದರ್ಶನ. ಈ ಬಾರಿಯ ವರ್ಲ್ಡ್ಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಅಬ್ಬರಕ್ಕೆ ನಲುಗದ ಬೌಲರ್‌ಗಳೇ ಇಲ್ಲ ಅನ್ನುವಂತಾಗಿದೆ. ಟೂರ್ನಿಯ ಟಾಪ್ 10 ಬ್ಯಾಟ್ಸಮನ್ ಫೈಕಿ 7 ಜನ ಬ್ಯಾಟರ್‌ಗಳು ಭಾರತೀಯರೇ. ಜೊತೆಗೆ ಈ ಮೂವರು ಕೂಡ ಟಾಪ್ ಆರ್ಡರ್ ಬ್ಯಾಟ್ಸಮನ್‌ಗಳು.
Advertisement
ಕೊಹ್ಲಿ ಟೂರ್ನಿಯ ಟಾಪ್ ಸ್ಕೋರರ್ ಆದ್ರೆ, ರೊಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ಇನ್ನೂ ಶ್ರೇಯಸ್ ಅಯ್ಯರು ಕೂಡ ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟಾಪ್ ಸ್ಕೋರರ್ ಪಟ್ಟಿಯಲ್ಲಿ 7 ಸ್ಥಾನಕ್ಕೆ ಏರುವ ಮೂಲಕ ತಮ್ಮ ಸಾಮಾರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಉಳಿದಂತೆ ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಕೂಡ ಆಯಾ ಆಯಾ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿದ್ದು, ತಂಡಕ್ಕೆ ಕಷ್ಟದ ಸಂದರ್ಭ ಎದುರಾದರೆ ನೆರವಾಗಲಿದ್ದಾರೆ.
Advertisement
ಭಾರತ ತಂಡದ ಟಾಪ್ ಆರ್ಡರ್ ಪರ್ಫಮೆನ್ಸ್:
ವಿರಾಟ್ ಕೊಹ್ಲಿ – 10 ಪಂದ್ಯ – 711 ರನ್ – 90 ಸ್ಟ್ರೈಕ್ ರೇಟ್
ರೋಹಿತ್ ಶರ್ಮಾ – 10 ಪಂದ್ಯ – 550 ರನ್ -124 ಸ್ಟ್ರೈಕ್ ರೇಟ್
ಶ್ರೇಯಸ್ ಅಯ್ಯರ್ – 10 ಪಂದ್ಯ – 526 ರನ್ – 113 ಸ್ಟ್ರೈಕ್ ರೇಟ್
ಕೆಎಲ್ ರಾಹುಲ್ – 10 ಪಂದ್ಯ – 386 ರನ್ -98 ಸ್ಟ್ರೈಕ್ ರೇಟ್
ಶುಭಮನ್ ಗಿಲ್ – 08 ಪಂದ್ಯ – 350 ರನ್ – 115 ಸ್ಟ್ರೈಕ್ ರೇಟ್
ಇದು ಬ್ಯಾಟರ್‌ಗಳ ಅಂಕಿ ಅಂಶ ಆದ್ರೆ ಅತ್ತ ಬೌಲರ್‌ಗಳು ಕೂಡ ಯಾವ ತಂಡಕ್ಕೂ ಕಮ್ಮಿ ಇಲ್ಲ ಎನ್ನುವಂತೆಯೇ ಪ್ರದರ್ಶನ ನೀಡಿದ್ದಾರೆ. ಅತ್ತ ಸದ್ಯ ಭಾರತೀಯ ಸ್ಪೀನ್ ಅಸ್ತ್ರವನ್ನು ಎದುರಿಸೋದೆ ಆಸ್ಟ್ರೇಲಿಯಾ ಬ್ಯಾಟರ್‌ಗಳಿಗಿರೋ ದೊಡ್ಡ ಸವಾಲು ಕಾರಣ. ಮೊದಲ ಪಂದ್ಯದಲ್ಲೂ ಕೂಡ ಭಾರತೀಯ ಸ್ಪೀನರ್‌ಗಳಿಗೆ ಆಸ್ಟ್ರೆಲಿಯನ್ನರು ಪರದಾಡಿದ್ದನ್ನು ನೋಡಬಹುದು. ಜೊತೆಗೆ ನ್ಯೂ ಬಾಲ್‌ನಲ್ಲಿ ಬುಮ್ರಾ ಮತ್ತು ಶಮಿ ಕಮಾಲ್ ಸದ್ಯ ಆಸೀಸ್ ಪ್ಲೇಯರ್ಸ್ಗೆ ಮತ್ತಷ್ಟು ಟೆನ್ಷನ್ ಹೆಚ್ಚಿಸಿರೋದು ಸುಳ್ಳಲ್ಲ. ಬೌಲಿಂಗ್ ವಿಭಾಗದಲ್ಲೂ ಸದ್ಯ ಟಾಪ್ ವಿಕೆಟ್ ಟೇಕರ್ಸ್ ಲೀಸ್ಟ್ ನಲ್ಲಿ ಭಾರತದ ಮೂವರು ಪ್ಲೇಯರ್ಸ್ಗಳಿದ್ದು ಅದರಲ್ಲಿ ಶಮಿ ಮೊದ ಸ್ಥಾನಿಯಾದ್ರೆ, ಬುಮ್ರಾ ಮತ್ತು ಜಡೇಜಾ ಕ್ರಮವಾಗಿ 5 ಮತ್ತು 7 ನೇ ಸ್ಥಾನದಲ್ಲಿದ್ದಾರೆ. ಆದರೆ ಸದ್ಯ ಭಾರತಕ್ಕಿರೋದು 5 ನೇ ಬೌಲರ್‌ನ ಚಿಂತೆ. ಕಳೆದ ಪಂದ್ಯದಲ್ಲಿ ಸಿರಾಜ್ ಪ್ರದರ್ಶನ ತಂಡಕ್ಕೆ ಕೊಂಚ ತಲೆ ನೋವನ್ನ ತಂದೊಡ್ಡಿದೆ. ಸದ್ಯ ಉತ್ತಮ ಪ್ಲೇಯಿಂಗ್ ಇಲೆವನ್ ಕಾಂಬಿನೇಷನ್ ನೊಂದಿಗೆ ಕಣಕ್ಕಿಳಿದು ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದಿರೋ ಕಾರಣ, ಸಿರಾಜ್ ಚಿಂತೆ ನಡುವೆ ಅದೇ ಕಾಂಬಿನೇಷನ್ ಮುಂದುವರೆಸಿದ್ರೆ ಸೂಕ್ತ ಅನ್ನೋದು ಕ್ರಿಕೆಟ್ ತಜ್ಞರ ಅಭಿಪ್ರಾಯ.
ಮಹಮ್ಮದ್ ಶಮಿ – 6 ಪಂದ್ಯ – 23 ವಿಕೆಟ್
ಜಸ್ಪ್ರಿತ್ ಬೂಮ್ರ – 10 ಪಂದ್ಯ – 18 ವಿಕೆಟ್
ರವೀಂದ್ರ ಜಡೇಜಾ- 10 ಪಂದ್ಯ – 16 ವಿಕೆಟ್
ಒಟ್ಟಾರೆ ಇದೇ ಫಾರ್ಮ್ ಇಂದಿನ ಪಂದ್ಯದಲ್ಲೂ ಮುಂದುವರೆಯಬೇಕಿದೆ. ಆಗ ಮಾತ್ರ ಈ ಬಾರಿ ವಿಶ್ವಕಪ್ ಕನಸು ನನಸಾಗೋಕೆ ಸಾಧ್ಯ.