ಧೋನಿ ಅನುಪಸ್ಥಿತಿಯಲ್ಲಿ ದಾಖಲೆ ನಿರ್ಮಿಸಲಿರುವ ಟೀಂ ಇಂಡಿಯಾ!

Public TV
3 Min Read
ind vs aus dhoni

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿ ನ.21 ರಂದು ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಟಿ20 ಪಂದ್ಯದಿಂದ ಆರಂಭವಾಗಲಿದ್ದು, ಅನುಭವಿ ಆಟಗಾರ ಧೋನಿ ಅನುಪಸ್ಥಿತಿಯಲ್ಲಿ ಕೊಹ್ಲಿ ನಾಯಕತ್ವದ ಯುವಪಡೆ ಆಸೀಸ್ ತಂಡವನ್ನು ಎದುರಿಸುತ್ತಿದೆ.

ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಆಸೀಸ್ ತಂಡವನ್ನು ಹಿಂದಿಕ್ಕಿ ಟೀಂ ಇಂಡಿಯಾ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಒಂದೊಮ್ಮೆ ಸರಣಿಯಲ್ಲಿ ಟೀಂ ಇಂಡಿಯಾವನ್ನು ಆಸೀಸ್ ವೈಟ್‍ವಾಷ್ ಮಾಡಿದರೆ ಮತ್ತೆ 2ನೇ ಸ್ಥಾನವನ್ನು ಪಡೆಯಲಿದ್ದಾರೆ.

ಆಸೀಸ್ ವಿರುದ್ಧ ಇದುವರೆಗೂ ಟೀಂ ಇಂಡಿಯಾ ಆಡಿರುವ 15 ಟಿ20 ಪಂದ್ಯದಲ್ಲಿ ಧೋನಿ ಸ್ಥಾನ ಪಡೆದಿದ್ದರು. ಇದೇ ಮೊದಲ ಬಾರಿಗೆ ಆಸೀಸ್ ವಿರುದ್ಧ ಧೋನಿ ಇಲ್ಲದ ಟೀಂ ಇಂಡಿಯಾ ಕಣಕ್ಕೆ ಇಳಿಯುತ್ತಿದೆ. ಆಸೀಸ್ ನೆಲದಲ್ಲಿ 6 ಪಂದ್ಯಗಳನ್ನು ಆಡಿರುವ ಭಾರತ 4 ರಲ್ಲಿ ಗೆದ್ದು, 2ರಲ್ಲಿ ಸೋಲುಂಡಿದೆ. ಉಳಿದಂತೆ ಧೋನಿ ಅವರಂತೆ ಆಸೀಸ್ ವಿರುದ್ಧದ 15 ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ರೋಹಿತ್ ಶರ್ಮಾ 25.72 ಸರಾಸರಿಯಲ್ಲಿ ರನ್ ಗಳಿಸಿದ್ದು, 283 ರನ್ ಗಳಿಸಿದ್ದಾರೆ. ನಾಯಕ ಕೊಹ್ಲಿ 84 ಸರಾಸರಿಯಲ್ಲಿ ಆಸೀಸ್ ವಿರುದ್ಧ ಆಡಿರುವ 5 ಇನ್ನಿಂಗ್ಸ್ ಗಳಲ್ಲಿ 250 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿದೆ.

ಟಿ20 ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾ 96 ಸಿಕ್ಸರ್ ಸಿಡಿಸಿದ್ದು, 103 ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಟಿ20 ಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲು ರೋಹಿತ್‍ಗೆ (2,206 ರನ್) 65 ರನ್ ಅಗತ್ಯವಿದೆ. ಸದ್ಯ ಗುಪ್ಟಿಲ್ ಟಿ20 ಕ್ರಿಕೆಟ್‍ನಲ್ಲಿ 2,271 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಬಲಾಬಲ: ಟೀಂ ಇಂಡಿಯಾ ಹಾಗೂ ಆಸೀಸ್ ತಂಡಗಳ ಬಲಾಬಲ ನೋಡುವುದಾದರೆ ಇತ್ತೀಚೆಗೆ ಆಸ್ಟ್ರೇಲಿಯಾ ಆಡಿರುವ 4 ಟಿ20 ಪಂದ್ಯಗಳಲ್ಲಿ ಸೋಲುಂಡು ಒತ್ತಡದಲ್ಲಿದೆ. ಇತ್ತ ಟೀಂ ಇಂಡಿಯಾ ಇತ್ತೀಚೆಗೆ ಆಡಿರುವ 12 ಟಿ20 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇತ್ತಂಡಗಳು ಕೊನೆ ಬಾರಿ ಗುವಾಹತಿಯಲ್ಲಿ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಆಸೀಸ್ ಗೆದ್ದು ಬೀಗಿತ್ತು.

ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭ ಮಾಡಲಿರುವ ಶಿಖರ್ ಧವನ್, ರೋಹಿತ್ ಶರ್ಮಾ ವರ್ಷದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಕೊಹ್ಲಿ ಆಸೀಸ್ ವಿರುದ್ಧ ಆಡಿರುವ 11 ಟಿ20 ಪಂದ್ಯಗಳಲ್ಲಿ 60.42 ಸರಾರಿಯಲ್ಲಿ 423 ರನ್ ಗಳಿಸಿದ್ದಾರೆ. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಬಲ ನೀಡುವ ನಿರೀಕ್ಷೆ ಇದೆ. ಬೌಲಿಂಗ್ ವಿಭಾಗದಲ್ಲಿ ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಭಾರತದ ಶಕ್ತಿಯಾಗಿದ್ದಾರೆ.

ಟೀಂ ಇಂಡಿಯಾ ಇಂತಿದೆ: ನಾಳೆ ನಡೆಯುವ ಪಂದ್ಯಕ್ಕೆ ಬಿಸಿಸಿಐ 12 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್ ಮತ್ತು ಯಜುವೇಂದ್ರ ಚಹಲ್ ಆಯ್ಕೆ ಆಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *