ಮುಂಬೈ: ಟಿ20 ವಿಶ್ವಕಪ್ (T20 World Cup 2024) ಗೆದ್ದ ಟೀಂ ಇಂಡಿಯಾ ಆಟಗಾರರನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭವ್ಯ ಸಮಾರಂಭ ಆಯೋಜಿಸಿ ಅಭಿನಂದಿಸಲಾಯಿತು. ಈ ವೇಳೆ ‘ವಂದೇ ಮಾತರಂ’ ಹಾಡನ್ನು ಹಾಡುವ ಮೂಲಕ ಟೀಂ ಇಂಡಿಯಾ (Team India) ಆಟಗಾರರು ಮತ್ತು ಅಭಿಮಾನಿಗಳು ದೇಶಪ್ರೇಮ ಮೆರೆದರು.
ಕ್ರೀಡಾಂಗಣದಲ್ಲಿ ರೋಹಿತ್ ಪಡೆ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿತು. ಈ ವೇಳೆ ಅಭಿಮಾನಿಗಳು ಸಹ ಕ್ರಿಕೆಟಿಗರ ಜೊತೆ ಸಂಭ್ರಮಾಚರಿಸಿದರು. ಕ್ರೀಡಾಂಗಣದಲ್ಲಿ ‘ವಂದೇ ಮಾತರಂ’ ಹಾಡು ಕೇಳಿಬಂತು. ಇದಕ್ಕೆ ಆಟಗಾರರು, ಫ್ಯಾನ್ಸ್ ಎಲ್ಲರೂ ದನಿಗೂಡಿದರು. ಇದನ್ನೂ ಓದಿ: ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ
Advertisement
Advertisement
ಎಲ್ಲರೂ ಹಾಡನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದರು. ಈ ಸಂದರ್ಭ ನಿಜಕ್ಕೂ ಮೈನವರೇಳಿಸುವಂತಿತ್ತು. ದೃಶ್ಯದ ವೀಡಿಯೋವನ್ನು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
Advertisement
ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು. ಇದನ್ನೂ ಓದಿ: Champions: ವಿಶ್ವ ಚಾಂಪಿಯನ್ಸ್‌ಗೆ ಬಂಪರ್ ಗಿಫ್ಟ್ – 125 ಕೋಟಿ ರೂ. ಬಹುಮಾನ ಚೆಕ್ ವಿತರಣೆ
Advertisement
Vande Mataram… 🇮🇳🙌
Goosebumps guaranteed. 😮💨🔥
pic.twitter.com/kqqvJfjreO
— Royal Challengers Bengaluru (@RCBTweets) July 4, 2024
ಮುಂಬೈಗೆ ತೆರಳುವ ಮುನ್ನ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.