ಹೈದರಾಬಾದ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ತೆಲಂಗಾಣ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಯಶಸ್ಸು ಸೇರಿದಂತೆ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ಸಿರಾಜ್ ಅವರಿಗೆ ಗ್ರೂಪ್-1 ಸರ್ಕಾರಿ ಹುದ್ದೆಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ಇದನ್ನೂ ಓದಿ: ನನಗೆ ಐಪಿಎಲ್ಗಿಂತಲೂ ಟೆಸ್ಟ್ ಕ್ರಿಕೆಟ್ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್ ರಿಯಾಕ್ಷನ್
Advertisement
Congratulations Mohammad Siraj
for the post of DSP in Telangana State#MohammadSiraj #MohammedSiraj #Telangana pic.twitter.com/kfKtmebEkG
— Rahul (@Rahul64590994) October 12, 2024
Advertisement
ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಹುದ್ದೆಯ ಜೊತೆಗೆ, ಹೈದರಾಬಾದ್ನ ಜುಬಿಲಿ ಹಿಲ್ಸ್ನ ರಸ್ತೆ ಸಂಖ್ಯೆ 78 ರ ಬಳಿ ಸರ್ಕಾರವು 600 ಚದರ ಗಜಗಳಷ್ಟು ಭೂಮಿಯನ್ನು ಕೂಡ ಮಂಜೂರು ಮಾಡಿದೆ.
Advertisement
Advertisement
ಸಿರಾಜ್ ಪೊಲೀಸ್ ಸಮವಸ್ತ್ರದಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಗೌರವಕ್ಕಾಗಿ ಸಿರಾಜ್ ಅವರು ಸಿಎಂಗೆ ಅಪಾರ ಮೆಚ್ಚುಗೆ ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!