ಬೆಂಗಳೂರು : 2023 ರ ಏಕದಿನ ಕ್ರಿಕೆಟ್ ವಿಶ್ವಕಪ್‍ಗೆ ಟೀಂ ಇಂಡಿಯಾದಲ್ಲಿ ಪೈಪೋಟಿ ಆರಂಭವಾಗಿದ್ದು, ಅದರಲ್ಲೂ ಆರಂಭಿಕನ ಸ್ಥಾನಕ್ಕೆ ಪೃಥ್ವಿ ಶಾ, ಶುಭಮನ್ ಗಿಲ್, ಮಯಾಂಕ್ ಅಗರ್ ವಾಲ್, ಕೆ.ಎಲ್. ರಾಹುಲ್, ಶಿಖರ್ ಧವನ್ ಮಧ್ಯೆ ಸ್ಪರ್ಧೆ ಪ್ರಾರಂಭವಾಗಿದೆ.
ಸದ್ಯ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಓಪನಿಂಗ್ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಅವರನ್ನು ನ್ಯೂಜಿಲ್ಯಾಂಡ್ ಪ್ರವಾಸದಿಂದ ಕೈ ಬಿಡಲಾಗಿದೆ. ಈ ಸ್ಥಾನಕ್ಕೆ ಪೃಥ್ವಿ ಶಾ ಅವರನ್ನ ಆಯ್ಕೆ ಮಾಡಲಾಗಿದೆ.
Advertisement
Advertisement
ನ್ಯೂಜಿಲೆಂಡ್ ಎ ವಿರುದ್ಧ ಪೃಥ್ವಿ ಶಾ ಶತಕ ಸಿಡಿಸಿ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ರಣಜಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ. ಒಂದು ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ಪೃಥ್ವಿ ಶಾ ಚೆನ್ನಾಗಿ ಪ್ರದರ್ಶನ ತೋರಿದರೆ ವಿಶ್ವಕಪ್‍ಗೆ ಅವಕಾಶ ಗಿಟ್ಟಿಸುವ ಸಾಧ್ಯತೆಯಿದೆ.
Advertisement
ಕನ್ನಡಿಗ ಕೆ.ಎಲ್.ರಾಹುಲ್ ಕೂಡಾ ಉತ್ತಮವಾಗಿ ಆಡುತ್ತಿದ್ದಾರೆ. ರಿಷಬ್ ಪಂತ್ ಗಾಯದ ಸಮಸ್ಯೆಯಿಂದಾಗಿ ರಾಹುಲ್ ಅವರಿಗೆ ಕೀಪಿಂಗ್ ಜವಾಬ್ದಾರಿಯೂ ಸಿಕ್ಕಿದೆ. ಓಪನಿಂಗ್ ನಲ್ಲಿ ರೋಹಿತ್ ಜೊತೆ ಉತ್ತಮ ಜೊತೆಯಾಟ ಆಡಿದ್ದು, ಟಿಂ ಮ್ಯಾನೆಜ್‍ಮೆಂಟ್ ರಾಹುಲ್ ಅವರನ್ನೇ ಆರಂಭಿಕನ ಸ್ಥಾನಕ್ಕೆ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.
Advertisement
ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿರೋ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡಾ ಆಯ್ಕೆಗಾರರ ಫೆವರೇಟ್ ಆಗಿದ್ದಾರೆ. ಒಂದು ವೇಳೆ ಪೃಥ್ವಿ ಶಾ ಮತ್ತು ರಾಹುಲ್ ವಿಫಲವಾದರೆ ಮಯಾಂಕ್ ಅಗರ್ವಾಲ್ ಅವರಿಗೂ ಚಾನ್ಸ್ ಸಿಗುವ ಸಾಧ್ಯತೆ ಇದೆ.
ಅಂಡರ್ 19 ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಈಗ ರಣಜಿಯಲ್ಲೂ ಉತ್ತಮ ಪ್ರದರ್ಶನ ತೋರುತ್ತಿರೋ ಶುಭಮನ್ ಗಿಲ್ ಕೂಡಾ ಓಪನಿಂಗ್ ರೇಸ್ ನಲ್ಲಿ ಇದ್ದಾರೆ. ಭಾರತ ಎ ತಂಡ ಹಾಗೂ ರಣಜಿ ಯಲ್ಲಿ ಶುಭಮನ್ ಗಿಲ್ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಓಪನಿಂಗ್ ಸ್ಥಾನಕ್ಕೆ ಇವರ ಹೆಸರು ಕೇಳಿ ಬರುತ್ತಿದೆ. ಶಿಖರ್ ಧವನ್ ಓಪನಿಂಗ್ ಸ್ಥಾನಕ್ಕೆ ಟೀಂ ಇಂಡಿಯಾದ ಮೊದಲ ಆಯ್ಕೆ. ಫಾರ್ಮ್ ನಲ್ಲಿ ಇದ್ದರೆ ಬಹುತೇಕ ಅವರೇ ರೋಹಿತ್ ಜೊತೆ ಆಟ ಪ್ರಾರಂಭ ಮಾಡ್ತಾರೆ. ಗಾಯದ ಸಮಸ್ಯೆಯಿಂದಾಗಿ ಧವನ್ ಮತ್ತೆ ಆಯ್ಕೆ ಆಗಬೇಕಾದ್ರೆ ಉತ್ತಮ ಪ್ರದರ್ಶನ ತೋರಲೇಬೇಕು. ಒಂದು ವೇಳೆ ಧವನ್ ಉತ್ತಮ ಪ್ರದರ್ಶನ ನೀಡದೇ ಹೋದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವುದು ಗ್ಯಾರಂಟಿ. ಹೀಗಾಗಿ 5 ಜನರ ಮಧ್ಯೆ ಭಾರೀ ಪೈಪೋಟಿಯಿದ್ದು 2023ರ ವಿಶ್ವಕಪ್ ಕ್ರಿಕೆಟಿನಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಕಾದುನೋಡಬೇಕು.