– ಪದೇ ಪದೇ ಭಾರತಕ್ಕೆ ಮುಳುವಾಗ್ತಿದೆ ಆಸೀಸ್
ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ದೈತ್ಯ ಆಸ್ಟ್ರೇಲಿಯಾ ತಂಡ ಪದೇ ಪದೇ ಭಾರತಕ್ಕೆ ಮುಳುವಾಗುತ್ತಿರೋದು ಸಾಬೀತಾಗುತ್ತಿದೆ. ಕಳೆದ 8 ತಿಂಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧವೇ ಮೂರು ವಿಶ್ವಕಪ್ ಟ್ರೋಫಿ ಕಳೆದುಕೊಂಡಿರುವುದೇ ಇದಕ್ಕೆ ಉದಾಹರಣೆಯಾಗಿದೆ.
ಹೌದು. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್, ಏಕದಿನ ವಿಶ್ವಕಪ್ ಟ್ರೋಫಿ ಕಳೆದುಕೊಂಡಿದ್ದ ಭಾರತ 2024ರ ವರ್ಷಾರಂಭದಲ್ಲೇ ಆಸೀಸ್ ವಿರುದ್ಧ ಅಂಡರ್ 19 ವಿಶ್ವಕಪ್‌ನಲ್ಲೂ ಸೋತು ನಿರಾಸೆ ಅನುಭವಿಸಿದೆ. ಅಲ್ಲದೇ ಆಸ್ಟ್ರೇಲಿಯಾ ತಂಡ ಸೀನಿಯರ್ ಮತ್ತು ಅಂಡರ್ 19 ವಿಭಾಗದಲ್ಲಿ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
Advertisement
Advertisement
WTCನಲ್ಲಿ ಹೀನಾಯ ಸೋಲು:
2023ರ ಜೂನ್ 11ರಂದು ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ ವಿರುದ್ಧ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ 2ನೇ ಆವೃತ್ತಿಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಟೀಂ ಇಂಡಿಯಾ ಅಂದು 209 ರನ್‌ಗಳ ಅಂತರದಿಂದ ಸೋಲು ಕಂಡಿತ್ತು.
Advertisement
Advertisement
ಏಕದಿನ ವಿಶ್ವಕಪ್‌ನಲ್ಲೂ ಸೋಲು:
ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಭಾರತ ಫೈನಲ್‌ನಲ್ಲಿ ಆಸೀಸ್ ವಿರುದ್ಧವೇ ಸೋತಿತ್ತು. ನವೆಂಬರ್ 19ರಂದು ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸೀಸ್ ವಿರುದ್ಧ 6 ವಿಕೆಟ್‍ಗಳ ಸೋಲು ಕಂಡಿತು.
U-19 ವಿಶ್ವಕಪ್‌ನಲ್ಲೂ ಸೋಲು:
ಆಸ್ಟ್ರೇಲಿಯಾದ ಅಡಿಲೇಟ್ ಓವೆಲ್ ಕ್ರೀಡಾಂಗಣದಲ್ಲಿ ಭಾನುವಾರ (ಫೆ.11) ನಡೆದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿಯೂ ಸಹ ಭಾರತ ಆಸೀಸ್ ವಿರುದ್ಧವೇ ಸೋತಿದೆ. ಭಾನುವಾರ ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿತ್ತು. ಆದ್ರೆ ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 43.5 ಓವರ್‌ಗಳಲ್ಲಿ ಕೇಲವ 174 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಆಸೀಸ್ ತಂಡ 4ನೇ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.