ಲಂಡನ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಮೇ 30 ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಈ ವೇಳೆ ತಂಡ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಹೆಲ್ಮೆಟ್‍ಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಮೇ 25ರ ಶನಿವಾರ ಮೊದಲ ಅಭ್ಯಾಸ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಹಿನ್ನೆಲೆಯಲ್ಲಿ ತಂಡದ ಆಟಗಾರರು ಇಂದು ಲಂಡನಿನ ನ ಕೆನ್ನಿಂಗ್ಟನ್ ಓವೆಲ್ ಮೈದಾನದಲ್ಲಿ ಅಭ್ಯಾಸದಲ್ಲಿ ಭಾಗವಹಿಸಿದ್ದರು.
Advertisement
Some ⚽️+ BIB catching for #TeamIndia on Day 1 at the drills ???? ????
Mr. @yuzi_chahal at it ????️#CWC19 pic.twitter.com/tupMzxNQUC
— BCCI (@BCCI) May 23, 2019
Advertisement
ಅಭ್ಯಾಸಕ್ಕೆ ಇಳಿದ ಟೀಂ ಇಂಡಿಯಾ ಆಟಗಾರರಿಗೆ ಕೋಚ್ ರವಿಶಾಸ್ತ್ರಿ ಕೆಲ ಸಲಹೆಗಳನ್ನು ನೀಡಿದರು. ನಾಯಕ ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ತಂಡದ ಆಟಗಾರರು ಅಭ್ಯಾಸದಲ್ಲಿ ಭಾಗವಹಿಸಿದ್ದರು. ಬ್ಯಾಟಿಂಗ್ ಕೋಚ್ ಸಂಜಯ್ ಬಂಗರ್ ತರಬೇತಿ ಸಂದರ್ಭದಲ್ಲಿ ಹಾಜರಿದ್ದರು. ಈ ವೇಳೆ ಶಾರ್ಟ್ ಬಾಲ್ ಎದುರಿಸಲು ಬ್ಯಾಟ್ ಬೀಸಿದ ಧವನ್‍ರ ಹೆಲ್ಮೆಟ್‍ಗೆ ಚೆಂಡು ಬಡಿದು ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಕೂಡಲೇ ವೈದ್ಯರು ಧವನ್‍ಗೆ ಚಿಕಿತ್ಸೆ ನೀಡಿದ್ದಾರೆ. ಆ ಬಳಿಕ ಧವನ್ ಅಭ್ಯಾಸವನ್ನು ನಿಲ್ಲಿಸಿ ತೆರಳಿದರು.
Advertisement
ಸ್ವಲ್ಪ ಸಮಯದ ಬಳಿಕ ಮತ್ತೆ ಅಂಗಳಕ್ಕೆ ಬಂದ ಧವನ್ ಮುಖದಲ್ಲಿ ನೋವು ಕಾಣುತ್ತಿತ್ತು. ಆದರೆ ಧವನ್ ಗಾಯದ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಶನಿವಾರವೇ ಅಭ್ಯಾಸ ಪಂದ್ಯ ಇರುವುದರಿಂದ ಧವನ್ ಆಡುತ್ತಾರ ಎನ್ನುವ ಬಗ್ಗೆ ಅನುಮಾನ ಮೂಡಿದೆ.
Advertisement
Getting into the groove Skipper @imVkohli for the #CWC19 #TeamIndia pic.twitter.com/LZHRnYxOyq
— BCCI (@BCCI) May 23, 2019