ಮುಂಬೈ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ 59 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಎಂ.ಎಸ್.ಧೋನಿ ಸೇರಿದಂತೆ ಅನೇಕ ಕ್ರಿಕೆಟಿಗರು, ಸ್ಟಾರ್ ಸಿನಿಮಾ ನಟರು ರೌಂಡ್ ಫಿಗರ್ ಮೊತ್ತವನ್ನು ಪಿಎಂ-ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಅವರು ಮಾತ್ರ ಏಕೆ 59 ಲಕ್ಷ ರೂ.ಗಳನ್ನ ನೀಡಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗವಾಸ್ಕರ್ ಏಕೆ 59 ಲಕ್ಷ ರೂ.ಗಳನ್ನು ನೀಡಿದ್ದಾರೆ ಎಂದು ಅವರ ಪುತ್ರ ರೋಹನ್ ಗವಾಸ್ಕರ್ ರಿವೀಲ್ ಮಾಡಿದ್ದಾರೆ.
Advertisement
Advertisement
ಸುನಿಲ್ ಗವಾಸ್ಕರ್ ನೀಡಿರುವ 59 ಲಕ್ಷ ರೂ. ದೇಣಿಗೆಯಲ್ಲಿ 35 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಾಗೂ ಉಳಿದ 24 ಲಕ್ಷ ರೂ.ಗಳನ್ನು ಪ್ರಧಾನಿಗಳ ನಿಧಿಗೆ ನೀಡಿದ್ದಾರೆ. ಈ ದೇಣಿಗೆ ಹಿಂದಿರುವ ಕಥೆಯನ್ನು ರಿವೀಲ್ ಮಾಡಿರುವ ರೋಹನ್ ಅವರು, ಭಾರತದ ಪರ 1971ರಿಂದ 1987ರವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದ ಗವಾಸ್ಕರ್ 35 ಶತಕ ಸಿಡಿಸಿದ್ದರು. ಅಲ್ಲದೇ ಮುಂಬೈ ಪರ ಆಡಿದ್ದ ಪಂದ್ಯಗಳಲ್ಲಿ 24 ಶತಕಗಳನ್ನು ಗವಾಸ್ಕರ್ ಸಿಡಿಸಿದ್ದರು. ಪರಿಣಾಮ ಈ ಶತಕಗಳ ಅನ್ವಯ ಗವಾಸ್ಕರ್ ದೇಣಿಗೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.
Advertisement
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ 3 ಕೋಟಿ ರೂ., ರೋಹಿತ್ ಶರ್ಮಾ 80 ಲಕ್ಷ ರೂ., ರೈನಾ 52 ಲಕ್ಷ ರೂ. ಸಚಿನ್ 50 ಲಕ್ಷ ರೂ., ರಹಾನೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇತ್ತ ಚೇತೇಶ್ವರ ಪೂಜಾರ ಕೂಡ ದೇಣಿಗೆ ನೀಡಿದ್ದು, ಆದರೆ ಎಷ್ಟು ಮೊತ್ತವನ್ನು ನೀಡಿದ್ದಾರೆ ಎಂದು ಮಾತ್ರ ತಿಳಿಸಿಲ್ಲ.
Advertisement
ಭಾರತದ ಪರ 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್ 34 ಶತಕ ಸಿಡಿಸಿದ್ದಾರೆ. ಈ ವೇಳೆಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಗವಾಸ್ಕರ್ ನಿರ್ಮಿಸಿದ್ದರು. ಬರೋಬ್ಬರಿ 29 ವರ್ಷಗಳ ಬಳಿಕ ಸಚಿನ್ 2005 ರಲ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಉಳಿದಂತೆ ಗವಾಸ್ಕರ್ ಆಡಿರುವ 108 ಏಕದಿನ ಪಂದ್ಯಗಳಲ್ಲಿ 1 ಶತಕ ಗಳಿಸಿದ್ದಾರೆ.