ಮುಂಬೈ: 2023 ಮಹಿಳಾ ಪ್ರೀಮಿಯರ್ ಲೀಗ್ ಹರಾಜು (WPL Auction 2023) ಪ್ರಕ್ರಿಯೆ ನಡೆಸಿ ಕೊಡಲು ನಿರೂಪಕಿಯಾಗಿ ಬಿಸಿಸಿಐ ಮಲ್ಲಿಕಾ ಸಾಗರ್ (Mallika Sagar) ಅವರನ್ನ ಆಯ್ಕೆಮಾಡಿತ್ತು.
Advertisement
ಸೋಮವಾರ ನಡೆದ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಮಹಿಳಾ ತಂಡದ ಆಟಗಾರರು ದುಬಾರಿ ಬೆಲೆಗೆ ಬಿಕರಿಯಾದರು. ಭಾರತದ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) 3.4 ಕೋಟಿ ರೂ. ದುಬಾರಿ ಬೆಲೆ ಆರ್‌ಸಿಬಿ (RCB) ತಂಡದ ಪಾಲಾದರು. ಇನ್ನು ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.8 ಕೋಟಿ ರೂ., ಶಫಾಲಿ ವರ್ಮಾ 1.90 ಕೋಟಿ ರೂ., ದೀಪ್ತಿ ಶರ್ಮಾ 2.60 ಕೋಟಿ ರೂ., ಜೆಮಿಮಾ ರೊಡ್ರಿಗಸ್ 2.20 ಕೋಟಿ ರೂ.ಗಳಿಗೆ ಬಿಡ್ ಆದರು.
Advertisement
???????? ???????????? ???????????????? ???????? ???????????????????????????? ✨
Meet the auctioneer for the first-ever #WPLAuction – Mallika Sagar ????????
Watch as ???? players get ready to go under the ???? ???????? Feb 13, 1:30 PM onwards, LIVE on #JioCinema & #Sports18 ????????#WPL #WPLonJioCinema #WomensPremierLeague pic.twitter.com/Lax1hTRu79
— JioCinema (@JioCinema) February 13, 2023
Advertisement
ಮಹಿಳಾ ಪ್ರೀಮಿಯರ್ ಲೀಗ್ ಹರಾಜು (WPL Auction 2023) ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ಮುಕ್ತಾಗೊಂಡಿತು. ಈ ಪ್ರಕ್ರಿಯೆಯನ್ನು ನಡೆಸಿಕೊಟ್ಟ ನಿರೂಪಕಿ ಮಲ್ಲಿಕಾ ಸಾಗರ್ ಅವರಿಗೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?
Advertisement
ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಸಹ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾ ಸಾಗರ್ ಅವರು ಅದ್ಭುತ ಹರಾಜುದಾರರಾಗಿದ್ದಾರೆ. ಅವರ ಆತ್ಮವಿಶ್ವಾಸ, ಸ್ಪಷ್ಟತೆ ತುಂಬಾ ಸಮಂಜಸವಾಗಿತ್ತು. ಡಬ್ಲ್ಯೂಪಿಎಲ್‌ನಲ್ಲಿ ನೇರವಾಗಿ ಸರಿಯಾದ ಆಯ್ಕೆಗಳು ನಡೆದಿವೆ, ವೆಲ್ ಡನ್ ಬಿಸಿಸಿಐ’ ಎಂದು ಶ್ಲಾಘಿಸಿದ್ದಾರೆ.
MALLIKA SAGAR is a terrific auctioneer
Confident , clear and very poised .
Straight away the right choices in the WPL
Well done @BCCI #WPLAuction #WPL2023
— DK (@DineshKarthik) February 13, 2023
ಮಲ್ಲಿಕಾ ಸಾಗರ್ ಯಾರು?
ಮಲ್ಲಿಕಾ ಸಾಗರ್ ಅವರು ಮುಂಬೈ ಮೂಲದ ಆರ್ಟ್ ಕಲೆಕ್ಟರ್ ಸಲಹೆಗಾರರಾಗಿದ್ದಾರೆ. ಭಾರತೀಯ ಕಲಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಹರಾಜು ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈ ಮೂಲಕ ಈ ವೃತ್ತಿಯಲ್ಲಿ ಅವರು ಅನುಭವ ಹೊಂದಿದ್ದರು. ಇದನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ
2001ರಲ್ಲಿ ಬ್ರಿಟಿಷ್ ಹರಾಜು ಮನೆಯಾದ ಕ್ರಿಸ್ಟೀಸ್‌ನಲ್ಲಿ ಮೊದಲ ಬಾರಿಗೆ ಹರಾಜನ್ನು ನಿಭಾಯಿಸಿದ್ದರು. ಈ ಮೂಲಕ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಭಾರತದ ಮೊದಲ ಮಹಿಳೆ ಎಂದೂ ಗುರುತಿಸಿಕೊಂಡಿದ್ದರು. ಹಿಂದಿನ ಐಪಿಎಲ್ ಹರಾಜಿನ ಹಳೆಯ ವೀಡಿಯೋಗಳನ್ನು ನೋಡುವ ಮೂಲಕ ಮಲ್ಲಿಕಾ ಡಬ್ಲ್ಯುಪಿಎಲ್ ಹರಾಜಿಗೆ ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ.
ಹರಾಜು ಪ್ರಕ್ರಿಯೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಿಕಾ, `ಹರಾಜು ಪ್ರಕ್ರಿಯೆ ನಡೆಸಿಕೊಡಲು ನನಗೆ ಜವಾಬ್ದಾರಿ ನೀಡಿರುವುದಕ್ಕೆ ತುಂಬಾ ಖುಷಿಯಾಗಿದೆ. ಇದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದಿದ್ದಾರೆ.
ಭಾರತೀಯ ಮಹಿಳೆಯರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಅರ್ಹತೆ ಪಡೆಯುತ್ತಾರೆ. ಉನ್ನತ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ; ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k