ಇಂದೋರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ಗಲ್ಲಿಯಲ್ಲಿ ಕ್ರಿಕೆಟ್ ಆಡಿ, ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಟೆಸ್ಟ್ ಪಂದ್ಯಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡವು ಸೋಮವಾರ ಇಂದೋರ್ ತಲುಪಿದೆ. ವಿರಾಟ್ ಕೊಹ್ಲಿ ಮಂಗಳವಾರ ಬಿಚೋಲಿಯ ಶ್ರೀಜಿ ವ್ಯಾಲಿ ಕ್ಯಾಂಪಸ್ ತಲುಪಿದ್ದಾರೆ. ಇಲ್ಲಿ ಕೊಹ್ಲಿ ಜಾಹೀರಾತನ್ನು ಚಿತ್ರೀಕರಿಸಿ, ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ವಿರಾಟ್ ನೋಡಲು ಸಾಕಷ್ಟು ಜನರು ಸೇರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
https://www.instagram.com/p/B4wmTo1p435/?utm_source=ig_embed
Advertisement
ಮಧ್ಯಪ್ರದೇಶದ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ತಂಡವು ಮಂಗಳವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಭ್ಯಾಸ ನಡೆಸಿದೆ. ಬಳಿಕ ಭಾರತ ತಂಡವು ಮಧ್ಯಾಹ್ನ 2 ಗಂಟೆಗೆ ಕ್ರೀಡಾಂಗಣವನ್ನು ತಲುಪಿ, ಸಂಜೆ 5 ರವರೆಗೆ ಅಭ್ಯಾಸ ನಡೆಸಿದೆ.
Advertisement
ಏಕದಿನ, ಟಿ-20 ಪಂದ್ಯಗಳಂತೆ ಟೆಸ್ಟ್ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಆಸಕ್ತಿ ತೋರುವುದಿಲ್ಲ. ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇರುತ್ತಾರೆ. ಆದರೆ ನವೆಂಬರ್ 14ರಂದು ಹೋಳ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿಗೆ ಜನ ಹೆಚ್ಚು ಆಸಕ್ತಿ ತೋರಿದ್ದಾರೆ. ಹೀಗಾಗಿ ಪ್ರತಿದಿನವೂ ಟಿಕೆಟ್ ತೆಗೆದುಕೊಳ್ಳುವವರ ಸಾಲು ಕಾಣಿಸುತ್ತಿದೆ. ಟಿಕೆಟ್ ಮಾರಾಟವು ಇಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಿದೆ. ಒಬ್ಬ ವ್ಯಕ್ತಿಯು ಯಾವುದೇ ಎರಡು ದಿನಗಳವರೆಗೆ ಏಕಕಾಲದಲ್ಲಿ ಟಿಕೆಟ್ ಖರೀದಿಸಬಹುದು.
Advertisement
ಬಿಸಿಸಿಐ ಅಧಿಕಾರಿಗಳು ಮಂಗಳವಾರ ಸಂಜೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಅವರು ಡ್ರೆಸ್ಸಿಂಗ್ ರೂಮ್, ವಿಐಪಿ ಬಾಕ್ಸ್ ಮತ್ತು ಪೆವಿಲಿಯನ್ ಸ್ಟ್ಯಾಂಡ್ ಅನ್ನು ಪರಿಶೀಲಿಸಿದರು. ಪಂದ್ಯದ ಸಮಯದಲ್ಲಿ, ಆಟಗಾರರ ಸುರಕ್ಷತೆಗೆ ಯಾವುದೇ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು 1,500 ಸೈನಿಕರನ್ನು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನಿಯೋಜಿಸಲಾಗುತ್ತದೆ ಎಂದು ವರದಿಯಾಗಿದೆ.
HE IS BACK – Captain @imVkohli spends quality time at the nets ahead of the 1st Test in Indore ???????????? #TeamIndia #INDvBAN pic.twitter.com/5Y2BakwRfj
— BCCI (@BCCI) November 12, 2019