ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಭಿಮಾನಿಗಳ ಮಧ್ಯೆ ಇಬ್ಬರು ಆಟಗಾರರಲ್ಲಿ ಟಿ20ಯಲ್ಲಿ ಯಾರು ಉತ್ತಮ ಎನ್ನುವ ಬಗ್ಗೆ ಈಗ ಚರ್ಚೆ ಜೋರಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ವಿರಾಟ್ ವೀರಾವೇಷ ತೋರಿಸಿದ್ದಾರೆ. 50 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸೇರಿ 94 ರನ್ ಗಳಿಸಿದ ಕೊಹ್ಲಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಆದರೆ ರೋಹಿತ್ ಶರ್ಮಾ 8 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಇದನ್ನೂ ಓದಿ: 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ
Advertisement
Advertisement
ಅಂತರಾಷ್ಟ್ರೀಯ ಟಿ20 ರನ್ ನಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ ಅವರಿಗೆ ನಾಲ್ಕು ರನ್‍ಗಳ ಅಗತ್ಯವಿದೆ. ಅಂತರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ 2,544 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 2,547 ರನ್ ದಾಖಲಿಸಿದ್ದಾರೆ. ಈ ಮೂಲಕ ರೋಹಿತ್‍ಗಿಂತ ಅತಿ ಕಡಿಮೆ ಪಂದ್ಯದಲ್ಲಿ ವಿರಾಟ್ 2,500 ರನ್‍ಗಳ ಗಡಿ ದಾಟಿದ್ದಾರೆ.
Advertisement
ಅಂತರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ ಒಟ್ಟು 76 ಪಂದ್ಯಗಳಲ್ಲಿ 68 ಇನ್ನಿಂಗ್ಸ್ ಆಡಿದ್ದಾರೆ. ಈ ಪೈಕಿ 19 ಇನ್ನಿಂಗ್ಸ್ ಗಳಲ್ಲಿ ಅಜೇಯರಾಗಿ ಉಳಿದ ವಿರಾಟ್, ಟೀಂ ಇಂಡಿಯಾ ಪರ 51.91 ಸರಾಸರಿಯಲ್ಲಿ 2,544 ರನ್ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧ ಶುಕ್ರವಾರ ಗಳಿಸಿದ 94 ರನ್ ಕೊಹ್ಲಿ ಟಿ20 ವೃತ್ತಿ ಜೀವನ ಶ್ರೇಷ್ಠ ರನ್ ರೇಟ್ ಆಗಿದೆ. ಟಿ20ಯಲ್ಲಿ ವಿರಾಟ್ 23 ಅರ್ಧಶತಕ ಬಾರಿಸಿದ್ದು, 241 ಬೌಂಡರಿ ಹಾಗೂ 64 ಸಿಕ್ಸರ್ ದಾಖಲಿಸಿದ್ದಾರೆ.
Advertisement
ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20ಯಲ್ಲಿ 102 ಪಂದ್ಯಗಳ ಪೈಕಿ 94 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದಾರೆ. ಇದರಲ್ಲಿ 14 ಇನ್ನಿಂಗ್ಸ್ ಗಳಲ್ಲಿ ಔಟಾಗದೆ ಉಳಿದಿದ್ದು, 31.83 ಸರಾಸರಿಯಲ್ಲಿ 2,547 ರನ್ ಗಳಿಸಿದ್ದಾರೆ. ನಾಲ್ಕು ಶತಕ ಹಾಗೂ 18 ಅರ್ಧಶತಕವನ್ನು ರೋಹಿತ್ ದಾಖಲಿಸಿದ್ದಾರೆ. ಈವರೆಗೆ ಹಿಟ್‍ಮ್ಯಾನ್ 226 ಬೌಂಡರಿ ಹಾಗೂ 115 ಸಿಕ್ಸರ್ ಸಿಡಿಸಿದ್ದಾರೆ.
50+ ರನ್ ಕೊಹ್ಲಿ ಟಾಪ್:
ಅಂತರಾಷ್ಟ್ರೀಯ ಟಿ20ಯಲ್ಲಿ 50ಕ್ಕಿಂತ ಹೆಚ್ಚು ರನ್ ಸಿಡಿದ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 23 ಬಾರಿ ಈ ಸಾಧನೆ ಮಾಡಿದರೆ, ರೋಹಿತ್ ಶರ್ಮಾ 22 ಬಾರಿ 50+ ರನ್ ಸಿಡಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‍ನ ಆಟಗಾರ ಮಾರ್ಟಿನ್ ಗಪ್ಟಿಲ್ ಮೂರನೇ ಸ್ಥಾನದಲ್ಲಿದ್ದು, ಅವರು 17 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಐರ್ಲೆಂಡ್‍ನ ಬ್ಯಾಟ್ಸ್‍ಮನ್ ಪಾಲ್ ಸ್ಟಿರ್ಲಿಂಗ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಲಾ 16 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ.