ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಏಕದಿನ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ. ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ 9 ಸಾವಿರ ರನ್ ಗಳಿಸಿರುವ ಭಾರತದ ಬ್ಯಾಟ್ಸ್‌ಮನ್ ಗಳಲ್ಲಿ ಹಿಟ್‍ಮ್ಯಾನ್ ಎರಡನೇ ಸ್ಥಾನದಲ್ಲಿದ್ದಾರೆ.
Advertisement
Advertisement
ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡು 42 ರನ್ ಗಳಿಸಿದ್ದರು. 9 ಸಾವಿರ ಏಕದಿನ ರನ್ ಗಳಿಸಲು ಅವರಿಗೆ ಕೇವಲ ನಾಲ್ಕು ರನ್ ಬೇಕಿದ್ದ ಹಂತದಲ್ಲಿ ವಿಕೆಟ್ ಕಳೆದುಕೊಂಡಿದ್ದರು. ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ ರೋಹಿತ್ 9 ಸಾವಿರ ಏಕದಿನ ರನ್‍ಗಳನ್ನು ಪೂರೈಸಿದ ವಿಶ್ವದ 3ನೇ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ.
Advertisement
ರೋಹಿತ್ ಶರ್ಮಾ ಅವರು ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ತಮ್ಮ 217ನೇ ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಗಳಿಸಿದ್ದರೆ, ಗಂಗೂಲಿ 228 ಇನ್ನಿಂಗ್ಸ್, ಸಚಿನ್ 235 ಇನ್ನಿಂಗ್ಸ್ ಮತ್ತು ಲಾರಾ 239 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
Advertisement
9000 and counting….
Rohit Sharma breaches the 9K mark in ODIs ???????? pic.twitter.com/UV3nBNJv7g
— BCCI (@BCCI) January 19, 2020
ಏಕದಿನ ಕ್ರಿಕೆಟ್‍ನಲ್ಲಿ ಕಡಿಮೆ ಇನಿಂಗ್ಸ್ ಆಡಿ 9 ಸಾವಿರ ರನ್ ಗಳಿಸಿದ ಬ್ಯಾಟ್ಸ್‌ಮನ್ ಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಕೊಹ್ಲಿ 194 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 205 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಲಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅವರು ತಮ್ಮ 9ನೇ ಏಕದಿನ ಅಂತರಾಷ್ಟ್ರೀಯ ಶತಕದ ಸಿಡಿಸಿದರು. ಸ್ಮಿತ್ ಅವರ 131 ರನ್ ಗಳ ಸಹಾಯದಿಂದ ಆಸೀಸ್ 9 ವಿಕೆಟ್ ನಕಷ್ಟಕ್ಕೆ 286 ರನ್ ಗಳಿಸಿದೆ. ಮಾರ್ನಸ್ ಲಾಬುಶೇನ್ 54 ರನ್ ಗಳಿಸಿದರು. ಇವರಿಬ್ಬರ ನಡುವೆ 127 ರನ್‍ಗಳ ಪಾಲುದಾರಿಕೆ ಇತ್ತು. ಇತ್ತ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಗಮನ ಸೆಳೆದರು.
Another day, another milestone for Rohit Sharma!#INDvAUS pic.twitter.com/hEf9rXHBnf
— ICC (@ICC) January 19, 2020