ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್‌ಮನ್, ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ಕ್ರಿಕೆಟ್ ಕಿಟ್‍ಗಳನ್ನು ಹರಾಜು ಮಾಡುವ ಮೂಲಕ ಸುಮಾರು 8 ಲಕ್ಷ ರೂ.ವನ್ನು ಬಡ ಮಕ್ಕಳ ಕಲ್ಯಾಣಕ್ಕಾಗಿ ನೀಡಿದ್ದಾರೆ.
ವರದಿಯ ಪ್ರಕಾರ, ಕೆ.ಎಲ್.ರಾಹುಲ್ ಅವರ ಬ್ಯಾಟ್ 2,64,228 ರೂ.ಗಳಿಗೆ ಹರಾಜು ಹಾಕಿದರೆ, ಅವರ ಟೆಸ್ಟ್ ಜರ್ಸಿ 1,32,774 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಅವರ ಏಕದಿನ ಪಂದ್ಯದ ಜರ್ಸಿ 1,13,240 ರೂ., ಹೆಲ್ಮೆಟ್ 1,22,677 ರೂ., ಪ್ಯಾಡ್‍ಗಳು 33,028 ರೂ. ಮತ್ತು ಟಿ20 ಜರ್ಸಿ 1,04,824 ರೂ.ಗೆ ಹರಾಜು ಮಾಡಿ, ಬಡ ಮಕ್ಕಳಿಗಾಗಿ ಹಣವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ರಾಹುಲ್ ಕಿಟ್‍ಗಳಿಂದ ಒಟ್ಟು 7,99,553 ರೂ. ಸಿಕ್ಕಿದೆ.
Advertisement
Advertisement
ಏಪ್ರಿಲ್ 18ರ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಕೆ.ಎಲ್.ರಾಹುಲ್, ಇದೇ ದಿನ ಬಡತನದಲ್ಲಿರುವ ಮಕ್ಕಳಿಗೆ ನೆರವಾಗುವ ಸಂಸ್ಥೆಗೆ ತಾವು ಸಹಾಯ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದರು. ”ನನ್ನ ಕ್ರಿಕೆಟ್ ಪ್ಯಾಡ್‍ಗಳು, ಗ್ಲೌಸ್‍ಗಳು, ಹೆಲ್ಮೆಟ್‍ಗಳು ಮತ್ತು ಕೆಲವು ಜೆರ್ಸಿಗಳನ್ನು ನಮ್ಮ ಸಹಯೋಗ ಪಾಲುದಾರ ಭಾರತ್ ಆರ್ಮಿಗೆ ಕೊಡುಗೆಯಾಗಿ ನೀಡಲು ಬಯಸಿದ್ದೇನೆ. ಅವರು ಇವೆಲ್ಲವನ್ನೂ ಹರಾಜಿಗಿಟ್ಟು ಅವೇರ್ ಫೌಂಡೇಶನ್‍ಗೆ ದೇಣಿಗೆ ಸಂಗ್ರಹಿಸಲಿದ್ದಾರೆ” ಎಂದು ಹೇಳಿದ್ದರು.
Advertisement
‘ಅವೇರ್ ಫೌಂಡೇಶನ್ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ನಿರ್ಧಾರ ನನ್ನ ಪಾಲಿಗೆ ವಿಶೇಷವೆನಿಸಿದೆ. ಮಕ್ಕಳಿಗೆ ನೆರವು ನೀಡುವುದಕ್ಕಾಗಿ ಇದಕ್ಕಿಂತ ಉತ್ತಮವಾದ ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ,’ ಎಂದು ರಾಹುಲ್ ಖುಷಿ ವ್ಯಕ್ತಪಡಿಸಿದ್ದರು.
Advertisement
ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಏಕದಿನ ಪಂದ್ಯವನ್ನು ಆಡಿದ್ದರು. ಟೂರ್ನಿಯಲ್ಲಿ 361 ರನ್ ಗಳಿಸಿದ್ದರಿಂದ 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದರು. ರಾಹುಲ್ ಅವರನ್ನು ರಿಸರ್ವ್ ಓಪನರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ತಂಡದ ಆಡಳಿತ ಮಂಡಳಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸಿತು. ನಂತರ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ರಾಹುಲ್ ಅವರಿಗೆ ಸಿಕ್ಕಿತು.
ರಾಹುಲ್ 36 ಟೆಸ್ಟ್ ಪಂದ್ಯಗಳಲ್ಲಿ 2,006 ರನ್ ಗಳಿಸಿದ್ದಾರೆ. ಅವರು ಈಗ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಪ್ರಸ್ತುತ ತಂಡದಲ್ಲಿ ನಾಲ್ವರು ಆರಂಭಿಕ ಬ್ಯಾಟ್ಸ್‌ಮನ್‍ಗಳು ಇರುವುದರಿಂದ ಒಂದೆರಡು ವರ್ಷ ಕಾಯಬೇಕಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಲಾಕ್‍ಡೌನ್‍ನಿಂದಾಗಿ ಇತರ ಆಟಗಾರರಂತೆ ರಾಹುಲ್ ಕೂಡ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ 2020ರಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಟೂರ್ನಿ ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಐಪಿಎಲ್ 2018ರ ಹರಾಜಿನಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 11 ಕೋಟಿ ರೂ.ಗೆ ಖರೀದಿಯಾಗಿದ್ದರು.