ಮುಂಬೈ: ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ (Team India) ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಬಲಿಷ್ಠ ಆಸ್ಟ್ರೇಲಿಯಾ (Australia) ತಂಡವನ್ನು ಹಿಂದಿಕ್ಕಿ ನಂ.1 ಪಟ್ಟ ಗಿಟ್ಟಿಸಿಕೊಂಡಿದೆ.
ಕಳೆದ ಮಾರ್ಚ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ (England) ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತ್ತು. ಆ ಬಳಿಕ ಯಾವುದೇ ಟೆಸ್ಟ್ ಸರಣಿ ಆಡದಿದ್ದರೂ ಭಾರತ ನಂ.1 ಪಟ್ಟಕ್ಕೇರಿದೆ. ಇದನ್ನೂ ಓದಿ: ದ್ರಾವಿಡ್ ಪುತ್ರನ ಸಿಕ್ಸ್ – ವಿಡಿಯೋ ವೈರಲ್, ಅಭಿಮಾನಿಗಳ ಮೆಚ್ಚುಗೆ
2023-25ನೇ ಆವೃತ್ತಿಯ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಆವೃತ್ತಿಯಲ್ಲಿ ಭಾರತ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ 74 ಅಂಕ ಗಳಿಸಿದೆ. ಆಸೀಸ್ ತಂಡ 12 ಪಂದ್ಯಗಳ ಪೈಕಿ 8 ರಲ್ಲಿ ಗೆಲುವು ಸಾಧಿಸಿ 90 ಅಂಕ ಗಳಿಸಿದ್ದರೂ 62.50 ಪಿಟಿಸಿ (Percentage Of Points Earned) ಇರುವುದರಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ನ್ಯೂಜಿಲೆಂಡ್ (50 ಪಿಟಿಸಿ), ಶ್ರೀಲಂಕಾ (50 ಪಿಟಿಸಿ), ದಕ್ಷಿಣ ಆಫ್ರಿಕಾ (38.89 ಪಿಟಿಸಿ) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿವೆ.
WTC ಅಂಕಪಟ್ಟಿಯ ಟಾಪ್-5 ತಂಡಗಳು ಯಾವುವು?
ಭಾರತ – 68.51 ಪಿಟಿಸಿ
ಆಸ್ಟ್ರೇಲಿಯಾ – 62.50 ಪಿಟಿಸಿ
ನ್ಯೂಜಿಲೆಂಡ್ – 50 ಪಿಟಿಸಿ
ಶ್ರೀಲಂಕಾ – 50 ಪಿಟಿಸಿ
ದಕ್ಷಿಣ ಆಫ್ರಿಕಾ – 38.89 ಪಿಟಿಸಿ
ಐಸಿಸಿ ಟೀಂ ರ‍್ಯಾಂಕಿಂಗ್‌ನಲ್ಲಿ ಏರಿಳಿತ:
ಕಳೆದ ವರ್ಷ ಐಸಿಸಿ ಟೆಸ್ಟ್, ಏಕದಿನ ಹಾಗೂ ಟಿ20 ರ‍್ಯಾಂಕಿಂಗ್‌ನಲ್ಲಿ ಮೂರು ಮಾದರಿಗಳಲ್ಲೂ ನಂ.1 ಸ್ಥಾನದಲ್ಲಿದ್ದ ಭಾರತ ಪ್ರಸಕ್ತ ವರ್ಷದಲ್ಲಿ ಏರಿಳಿತ ಕಂಡಿದೆ. ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 120 ಅಂಕ ಗಳಿಸಿ 2ನೇ ಸ್ಥಾನದಲ್ಲಿದ್ದರೆ, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಕ್ರಮವಾಗಿ 118 ಹಾಗೂ 267 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಇದನ್ನೂ ಓದಿ: ಭಾರತಕ್ಕೆ ಮರಳಿದ ವಿನೇಶ್ ಫೋಗಟ್‌ಗೆ ಅದ್ಧೂರಿ ಸ್ವಾಗತ
ಸತತ 2 ಬಾರಿ ಫೈನಲ್‌ನಲ್ಲಿ ಭಾರತಕ್ಕೆ ಸೋಲು:
2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲೇ ನ್ಯೂಜಿಲೆಂಡ್ (New Zealand) ತಂಡ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2ನೇ ಆವೃತ್ತಿಯಲ್ಲಿ ಆಸೀಸ್ ಬೌಲರ್‌ಗಳ ದಾಳಿಗೆ ತುತ್ತಾದ ಭಾರತ ಮತ್ತೊಮ್ಮೆ 209 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಈ ಮೂಲಕ ಸತತ 2 ಆವೃತ್ತಿಗಳಲ್ಲೂ ಭಾರತ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದನ್ನೂ ಓದಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?
2023ರ WTC ಫೈನಲ್ ಪಂದ್ಯದ ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 469/10
ಭಾರತ ಮೊದಲ ಇನ್ನಿಂಗ್ಸ್: 296/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 270/8d
ಭಾರತ ಎರಡನೇ ಇನ್ನಿಂಗ್ಸ್: 234/10