ಕಾನ್ಪುರ: ಭಾರತ ತಂಡವು (Team India) 2016ರ ನಂತರದಿಂದ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ.
ಬಾಂಗ್ಲಾದೇಶ (Bangladesh) ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಬಳಿಕ ಭಾರತ ತಂಡ ಈ ಸಾಧನೆಗೆ ಪಾತ್ರವಾಗಿದೆ. 2016ರಿಂದ ಈವರೆಗೆ ತಾನು ಆಡಿದ 86 ಪಂದ್ಯಗಳಲ್ಲಿ 53 ಪಂದ್ಯಗಳನ್ನು ಗೆದ್ದು ಈ ಸಾಧನೆ ಮಾಡಿದೆ. ಈ ಪೈಕಿ 21 ಪಂದ್ಯಗಳಲ್ಲಿ ಸೋತಿದ್ದು, 12 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇದನ್ನೂ ಓದಿ: ಟೆಸ್ಟ್‌ನಲ್ಲಿ ಟಿ20 ಆಟ – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಗೆದ್ದ ಭಾರತ
Advertisement
ಅತಿಹೆಚ್ಚು ಟೆಸ್ಟ್ ಪಂದ್ಯ ಗೆದ್ದ ತಂಡಗಳು:
ಭಾರತ: 86 ಪಂದ್ಯ – 53 ಗೆಲುವು – 21 ಸೋಲು – 12 ಡ್ರಾ
ಇಂಗ್ಲೆಂಡ್: 111 ಪಂದ್ಯ – 52 ಗೆಲುವು – 44 ಸೋಲು – 15 ಡ್ರಾ
ಆಸ್ಟ್ರೇಲಿಯಾ: 81 ಪಂದ್ಯ – 44 ಗೆಲುವು – 24 ಸೋಲು – 13 ಡ್ರಾ
ದಕ್ಷಿಣ ಆಫ್ರಿಕಾ: 69 ಪಂದ್ಯ – 35 ಗೆಲುವು – 28 ಸೋಲು – 6 ಡ್ರಾ
ನ್ಯೂಜಿಲಾಂಡ್: 66 ಪಂದ್ಯ – 32 ಗೆಲುವು – 24 ಸೋಲು – 10 ಡ್ರಾ
ಶ್ರೀ ಲಂಕಾ: 76 ಪಂದ್ಯ 31- ಗೆಲುವು – 33 ಸೋಲು – 12 ಡ್ರಾ
ಪಾಕಿಸ್ತಾನ: 63 ಪಂದ್ಯ – 22 ಗೆಲುವು – 33 ಸೋಲು – 8 ಡ್ರಾ
ವೆಸ್ಟ್ ಇಂಡೀಸ್: 68 ಪಂದ್ಯ – 19 ಗೆಲುವು – 37 ಸೋಲು – 12 ಡ್ರಾ
ಬಾಂಗ್ಲಾ ದೇಶ: 53 ಪಂದ್ಯ – 14 ಗೆಲುವು – 36 ಸೋಲು – 3 ಡ್ರಾ
Advertisement
This Indian team is easily one of the greatest ever team in history. 🇮🇳
– The dominance is crazy…!!! 🫡 pic.twitter.com/AD5q5jayh1
— Mufaddal Vohra (@mufaddal_vohra) October 1, 2024
Advertisement
5 ದಿನದ ಪಂದ್ಯ ನಡೆದಿದ್ದು ಮೂರೇ ದಿನ:
5 ದಿನಗಳಿಗೆ ನಿಗದಿಯಾಗಿದ್ದ ಭಾರತ – ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಮೂರು ದಿನ ಮಾತ್ರ ನಡೆಯಿತು. 2ನೇ ಇನ್ನಿಂಗ್ಸ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 35 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. 2, 3ನೇ ದಿನ ಮಳೆಗೆ ಪಂದ್ಯ ಬಲಿಯಾಗಿತ್ತು. 4ನೇ ದಿನ ಕ್ರೀಸ್ ಆರಂಭಿಸಿದ ಬಾಂಗ್ಲಾ 233 ರನ್‌ಗಳಿಗೆ ಆಲೌಟ್ ಆಗಿತ್ತು. ಆದ್ರೆ ಟಿ20 ಶೈಲಿಯಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಭಾರತ ಮೊದಲ ದಿನ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಬಿಗಿ ಬೌಲಿಂಗ್ ಹಿಡಿತ ಸಾಧಿಸಿದ ಭಾರತ, ಬಾಂಗ್ಲಾ ತಂಡವನ್ನು 146 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಕೊನೇ ದಿನ ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 3 ವಿಕೆಟ್‌ಗಳಿಗೆ 98 ರನ್ ಗಳಿಸಿ ಗೆಲುವು ಸಾಧಿಸಿತು.
Advertisement
ಭಾರತ ಗೆದ್ದಿದ್ದು ಹೇಗೆ?
ಮೊದಲ ದಿನ ಕೇವಲ 35 ಓವರ್ ಮಾತ್ರ ಬೌಲ್ ಮಾಡಲು ಸಾಧ್ಯವಾಗಿತ್ತು. 2 ಮತ್ತು 3ನೇ ದಿನ ಒಂದು ಎಸೆತ ಹಾಕಲು ಸಾಧ್ಯವಾಗಿರಲಿಲ್ಲ. 4 ದಿನದಿಂದ ಪಂದ್ಯ ಸರಿಯಾಗಿ ಆರಂಭವಾಗಿತ್ತು. ಭಾರತ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿತ್ತು. ಪರಿಣಾಮ ವೇಗದ 50, 100, 200, 250 ರನ್ ಹೊಡೆದ ತಂಡ ಎಂಬ ವಿಶ್ವದಾಖಲೆ ಬರೆದಿತ್ತು. ಈ ಮೂಲಕ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ರೇಟ್ ಹೊಂದಿದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಜನವರಿ 2016ರ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನು ಗೆದ್ದ ತಂಡ ಎಂಬ ಸಾಧನೆ ಮಾಡಿದೆ. ಭಾರತ 86 ಪಂದ್ಯವಾಡಿ 53 ಪಂದ್ಯ ಗೆದ್ದುಕೊಂಡಿದೆ. 21 ಪಂದ್ಯವನ್ನು ಸೋತರೆ 12 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 233/10
ಭಾರತ ಮೊದಲ ಇನ್ನಿಂಗ್ಸ್ 285/9
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 146/10
ಭಾರತ ಎರಡನೇ ಇನ್ನಿಂಗ್ಸ್ 98/3