ಜೋಹಾನ್ಸ್‌ಬರ್ಗ್: ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಶತಕದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟಿ20 ಪಂದ್ಯದಲ್ಲಿ 201 ರನ್ ಗಳಿಸಿ, ಆಥಿತೇಯ ತಂಡಕ್ಕೆ 202 ರನ್‌ಗಳ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತ ತಂಡಕ್ಕೆ ಬಿಟ್ಟುಕೊಟ್ಟಿತು. ಇದನ್ನೂ ಓದಿ: 89 ಸಾವಿರ ಕೋಟಿ ತಲುಪಿತು ಐಪಿಎಲ್ ಬ್ರ್ಯಾಂಡ್ ಮೌಲ್ಯ- ಯಾವ ತಂಡದ್ದು ಎಷ್ಟು?
Advertisement
Advertisement
ಟೀಂ ಇಂಡಿಯಾ (Team India) ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಶುಭಮನ್ ಗಿಲ್ ಜೋಡಿ 3ನೇ ಟಿ20 ಪಂದ್ಯದಲ್ಲೂ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸ್ಫೋಟಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ ಶುಭಮನ್ ಗಿಲ್ 6 ಎಸೆತಗಳಲ್ಲಿ 8 ರನ್ ಗಳಿಸಿ ಕೈಕೊಟ್ಟರು. ಈ ಬೆನ್ನಲ್ಲೇ ತಿಲಕ್ ವರ್ಮಾ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಇದರಿಂದ ಭಾರತ 2.3 ಓವರ್‌ಗಳಲ್ಲಿ 29 ರನ್ ಗಳಿಸಿದ್ದರೂ 2 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು.
Advertisement
ಬಳಿಕ 3ನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಜೊತೆಗೂಡಿದ ನಾಯಕ ಸೂರ್ಯಕುಮಾರ್ ಯಾದವ್ ಹರಿಣರ ಪಡೆಯ ಬೌಲರ್‌ಗಳನ್ನ ಚೆಂಡಾಡಿದರು. ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸುವ ಮೂಲಕ 70 ಎಸೆತಗಳಲ್ಲಿ ಈ ಜೋಡಿ 112 ರನ್‌ಗಳ ಜೊತೆಯಾಟ ನೀಡಿತು. ಬಳಿಕ ಸೂರ್ಯಕುಮಾರ್ ಹಾಗೂ ರಿಂಕು ಸಿಂಗ್ (Rinku Singh) ಅವರಿಂದ 27 ಎಸೆತಗಳಲ್ಲಿ 47 ರನ್‌ಗಳ ಸಣ್ಣ ಜೊತೆಯಾಟವೂ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು.
Advertisement
ಮೊದಲ 25 ಎಸೆತಗಳಲ್ಲಿ 27 ರನ್ ಗಳಿಸಿದ್ದ ಸೂರ್ಯಕುಮಾರ್, ಮುಂದಿನ 31 ಎಸೆತಗಳಲ್ಲಿ 73 ರನ್ ಚಚ್ಚಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕ ದಾಖಲಿಸಿದರು. ಇದನ್ನೂ ಓದಿ: RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್
ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ 56 ಎಸೆತಗಳಲ್ಲಿ 100 ರನ್ (7 ಬೌಂಡರಿ, 8 ಸಿಕ್ಸರ್) ಚಚ್ಚಿದರೆ, ಯುವ ಆರಂಭಿಕ ಯಶಸ್ವಿ ಜೈಸ್ವಾಲ್ 41 ಎಸೆತಗಳಲ್ಲಿ 60 ರನ್ (6 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಶುಭಮನ್ ಗಿಲ್ 8 ರನ್, ರಿಂಕು ಸಿಂಗ್ 14 ರನ್, ಜಿತೇಶ್ ಶರ್ಮಾ, ರವೀಂದ್ರ ಜಡೇಜಾ ತಲಾ 4 ರನ್, ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದ್ರೆ ತಿಲಕ್ ವರ್ಮಾ ಶೂನ್ಯ ಸುತ್ತಿದರು.