ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೆ ಟೀಂ ಡಿವೈಡ್ ಪಾಲಿಟಿಕ್ಸ್ ಆರಂಭವಾಗಿದ್ದು, ಯಡಿಯೂರಪ್ಪ ಟೀಂ ಹಾಗೂ ಬಿ.ಎಲ್. ಸಂತೋಷ್ ಟೀಂ ನಡುವೆ ಫೈಟ್ ಶುರುವಾಗಿದೆ.
ಆಪರೇಷನ್ ಕಮಲಕ್ಕೆ ಸಂತೋಷ್ ಟೀಂ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಕುರ್ಚಿ, ಮೇಯರ್ ಕುರ್ಚಿ ಏರಲು ರಾಷ್ಟ್ರೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟೀಂ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಬಿಬಿಎಂಪಿ ಮೇಯರ್ ಚುನಾವಣೆ: ಅಶೋಕ್ ವಿರುದ್ಧ ಬಿಎಲ್ ಸಂತೋಷ್ ಅಸಮಾಧಾನ?
Advertisement
Advertisement
ಹೀಗಾಗಿ ಬಿಎಸ್‍ವೈ ಟೀಂ ವಿರುದ್ಧ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್‍ಗೆ ಸಂತೋಷ್ ಅವರು ಯಡಿಯೂರಪ್ಪ ಹಾಗೂ ಅಶೋಕ್ ಅವರ ವಿರುದ್ಧ ದಾಖಲೆಗಳ ಸಹಿತ ದೂರು ನೀಡಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲೂ ಇಬ್ಬರು ನಾಯಕರ ನಡುವೆ ಗುದ್ದಾಟ- ಬಿಎಸ್‍ವೈ ಗೆ ಸಂಕಟ
Advertisement
ಆಪರೇಷನ್ ಕಮಲಕ್ಕೆ ಇಬ್ಬರು ನಾಯಕರು ಕೈ ಹಾಕಿ ಫೆಲ್ಯೂರ್ ಆಗಿದ್ದಾರೆ. ಎಲ್ಲದಕ್ಕೂ ಬೆಂಗಳೂರು ಉಸ್ತುವಾರಿ ಅಶೋಕ್ ಅವರೇ ಕಾರಣ. ಅಶೋಕ್ ಬೆನ್ನಿಗೆ ಯಡಿಯೂರಪ್ಪ ಅವರು ನಿಂತಿರೋದೇ ಇದಕ್ಕೆ ಕಾರಣವಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಹೈಕಮಾಂಡ್ ಕ್ರಮ ಕೈಗೊಳ್ಳಬೇಕಿದೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಅಶೋಕ್ ಪರ ಯಡಿಯೂರಪ್ಪ ಅವರು ಇದ್ದರೆ, ಡಿವಿಎಸ್ ಆಂಡ್ ತಮ್ಮ ಟೀಂ ಪರ ನಿಂತ ಸಂತೋಷ್ ಇದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv