ಬೆಂಗಳೂರು: 2022ರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teachers Recruitment 2022) ಸಂಧಿಸಿದಂತೆ ಶಿಕ್ಷಣ ಇಲಾಖೆಯು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, 13,352 ಮಂದಿ ಆಯ್ಕೆಯಾಗಿದ್ದಾರೆ.
1:1 ಅನುಪಾತದಲ್ಲಿ ಶಿಕ್ಷಕರನ್ನ ಆಯ್ಕೆ ಮಾಡಿದ್ದು, ವೆಬ್‌ಸೈಟ್‌ನಲ್ಲಿ (https://schooleducation.kar.nic.in) ಆಯ್ಕೆಪಟ್ಟಿ ಪ್ರಕಟಿಸಿದೆ. ಇಂಗ್ಲಿಷ್ ಭಾಷೆಗೆ 1,772 ಶಿಕ್ಷಕರು, ಗಣಿತ ಮತ್ತು ವಿಜ್ಞಾನಕ್ಕೆ 5,498, ಸಮಾಜ ಪಾಠಗಳಿಗೆ 4,524, ಜೀವ ವಿಜ್ಞಾನಕ್ಕೆ 1,558 ಶಿಕ್ಷಕರು ಸೇರಿ ಸೇರಿ ಒಟ್ಟು 13,352 ಶಿಕ್ಷಕರನ್ನ ನೇಮಕ ಮಾಡಿದೆ.
Advertisement
Advertisement
ಶಿಕ್ಷಣ ಇಲಾಖೆ (Education Department) ವೆಬ್‌ಸೈಟ್‌ನಲ್ಲಿ ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಿರುವ ವಿಷಯವನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಬುಧವಾರ ತಿಳಿಸಿದ್ದಾರೆ.
Advertisement
ಫೆಬ್ರವರಿ 27 ರಂದು 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಮಾ.1 ರಿಂದ ಮಾ.4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 15 ಆಕ್ಷೇಪಣೆಗಳು ಮಾತ್ರ ಪರಿಗಣನೆಗೆ ಅರ್ಹವಾಗಿದ್ದವು. ಇವುಗಳನ್ನ ಪರಿಶೀಲಿಸಿ ಮಾರ್ಚ್ 8 ರಂದು ಮುಖ್ಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?
Advertisement
ಮುಖ್ಯ ಆಯ್ಕೆಪಟ್ಟಿಯಲ್ಲಿ ಒಟ್ಟು 8,376 ಮಹಿಳೆಯರು, 4,973 ಪುರುಷರು ಹಾಗೂ ಮೂವರು ತೃತೀಯ ಲಿಂಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಿಂದ 2,413 ಮಹಿಳೆಯರು, 1779 ಪುರುಷರು ಹಾಗೂ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಿಂದ 5,963 ಮಹಿಳೆಯರು, 3,194 ಪುರುಷರು ಹಾಗೂ ಇಬ್ಬರು ತೃತೀಯ ಲಿಂಗಿ ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಯುಗಾದಿಗೆ ಮುನ್ನವೇ ಟಿಕೆಟ್ ಘೋಷಣೆಗೆ ಒತ್ತಡ – ಕೈ ನಾಯಕರಿಗೆ ಧರ್ಮ ಸಂಕಟ
ಈ ಪೈಕಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 5 ಹಾಗೂ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ 16 ಸೇರಿ ಒಟ್ಟು 21 ಇಂಜಿನಿಯರಿಂಗ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.