ಕೊಪ್ಪಳ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಿಕ್ಷಕರು ವಿನಾಃಕಾರಣ ಕಿರುಕುಳ ನೀಡ್ತಿರೋ ಆರೋಪವೊಂದು ಕೇಳಿಬಂದಿದೆ.
ಯಲಬುರ್ಗಾ ಹಿರೇವಂಕಲಕುಂಟಾ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸವಿತಾ(ಹೆಸರು ಬದಲಾಯಿಸಲಾಗಿದೆ) ಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಅವೈಜ್ಞಾನಿಕವಾಗಿ ಮಾಡಲು ಸಾಧ್ಯವಾಗದಷ್ಟು ಹೋಮ್ ವರ್ಕ್ ಕೊಡಲಾಗುತ್ತದೆ. ಮಾಡದಿದ್ದರೆ ಶಿಕ್ಷಕರು ಹೊಡೆಯುತ್ತಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಒಂದೇ ದಿನಕ್ಕೆ ಮೂರ್ನಾಲ್ಕು ನೋಟ್ ಬುಕ್ ಬರೆಯಬೇಕೆಂದು ಹಿಂಸೆ ನೀಡುತ್ತಾರೆ. ಹೋಮ್ ವರ್ಕ್ ಮಾಡದೆ ಇದ್ದರೆ ಟಿ.ಸಿ ತಗೆದುಕೊಂಡು ಹೋಗಿ ಎಂದು ಶಿಕ್ಷಕರು ಅವಾಜ್ ಹಾಕ್ತಿದ್ದಾರೆ. ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೀಗೆ ಕಿರುಕುಳ ಕೊಟ್ಟು, ಶಾಲೆಯಿಂದ ಬಿಡುವಂತೆ ಮಾಡಬೇಕು. ನಂತರ ಆ ಸ್ಥಾನಕ್ಕೆ ಹಣ ಪಡೆದು ಬೇರೆ ವಿದ್ಯಾರ್ಥಿಗೆ ಪ್ರವೇಶ ನೀಡಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗ್ತಿದೆ ಎಂದು ವಿದ್ಯಾರ್ಥಿನಿ ಪಾಲಕರು ಕೂಡ ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews