ಹೈದರಾಬಾದ್: ಆಂಧ್ರ ಪ್ರದೇಶ ಪಶ್ಚಿಮ ಗೋದಾವರಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಯಲ್ಲೇ ರೇಪ್ ಡೆಮೋ ತೋರಿಸುವ ಆರೋಪವೊಂದು ಇಬ್ಬರು ಶಿಕ್ಷಕರ ವಿರುದ್ಧ ಕೇಳಿ ಬಂದಿದೆ. ಗ್ರಾಮಸ್ಥರು ಆರೋಪ ಎದುರಿಸುತ್ತಿರುವ ಶಿಕ್ಷಕರನ್ನು ಹಿಡಿದು ಥಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣ ಅಧಿಕಾರಿ, ನಾವು ಚಿಂತಲಪುಡಿ ಮಂಡಲದಲ್ಲಿ ನಡೆದ ಘಟನೆ ಬಗ್ಗೆ ಪರಿಶೀಲಿಸಲು ಪ್ರಯತ್ನಿಸುತ್ತಿದ್ದೆವು. ಈ ವೇಳೆ ಈ ವಿಷಯ ತಿಳಿದು ಗ್ರಾಮಸ್ಥರು ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ.
Advertisement
Advertisement
ಶನಿವಾರ ಶಾಲೆಗೆ ಭೇಟಿ ನೀಡಿ ಮತ್ತು ಘಟನೆಯ ಮಾಹಿತಿ ಪಡೆಯುತ್ತೇನೆ. ಅಲ್ಲದೆ ತರಗತಿಯಲ್ಲಿ ನಿಜವಾಗಿಯೂ ಏನಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ. ನನಗೆ ನೀಡಿದ ವರದಿಯಲ್ಲಿ ಮಂಡಲ ಶಿಕ್ಷಣದ ಅಧಿಕಾರಿ ಈ ರೀತಿಯ ಘಟನೆ ನಡೆದಿಲ್ಲ ಎಂದು ಬರೆದಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಸಿ.ವಿ ರೇಣುಕಾ ತಿಳಿಸಿದ್ದಾರೆ.
Advertisement
ಶಾಲೆ ನೀಡಿದ ವರದಿಯಲ್ಲಿ ಮೂರನೇ ತರಗತಿಯ ಇಬ್ಬರು ಹುಡುಗರು ಹಾಗೂ ಹುಡುಗಿಯರು ನಡುವೆ ಜಗಳ ನಡೆದಿತ್ತು. ಈ ಜಗಳದಲ್ಲಿ ಹುಡುಗಿ ಗಾಯಗೊಂಡಿದ್ದಳು. ರೇಪ್ ಡೆಮೋ ತೋರಿಸುವ ಸಂದರ್ಭದಲ್ಲಿ ಬಾಲಕಿಯನ್ನು ಸ್ವಯಂಸೇವಕರಾಗಿ ಬಳಸಲಾಗಿದೆ ಎಂಬ ಸಾಕ್ಷಿ ದೊರೆತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಶಿಕ್ಷಕರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಚಿಂತಲಪುಡಿ ಪೊಲೀಸರು ಹೇಳಿದ್ದಾರೆ.