ಕೋಲಾರ: ಕಾಲೇಜು ವಿದ್ಯಾರ್ಥಿಗಳೊಂದಿಗೆ ಎನ್‍ಎಸ್‍ಎಸ್ ಶಿಬಿರದಲ್ಲಿ ಉಪನ್ಯಾಸಕನೊರ್ವ ಕನ್ನಡದ ಎವರ್ ಗ್ರೀನ್ ಹಾಡುಗಳಿಗೆ ಮಳೆಯಲ್ಲಿಯೇ ಸಖತ್ ಡ್ಯಾನ್ಸ್ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ವೆಂಗದಂದ್ರ ಸರ್ಕಾರಿ ಶಾಲೆಯ ಮೈದಾನದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್ ಸಕತ್ ಸ್ಟೆಪ್ಸ್ ಹಾಕಿ ಫೇಮಸ್ ಆಗಿದ್ದಾರೆ. ಕಳೆದ ಮೂರು ದಿನಗಳಿಂದ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಎನ್‍ಎಸ್‍ಎಸ್ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಸುರಿಯುತ್ತಿರುವ ಮಳೆ ನೀರಿನಲ್ಲಿ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಪರಸ್ಪರ ನೀರೆರಚಿಕೊಂಡು ಡಾನ್ಸ್ ಮಾಡಿದ್ದಾರೆ.
Advertisement
Advertisement
ಶಿಕ್ಷಕರು ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಆದರೆ ಸಕತ್ ಡಿ.ಜೆ ಸೌಂಡ್‍ಗೆ ಸಾರಾಯಿ ಶೀಸೆಯಲ್ಲಿ ನನ್ನ ದೇವಿ ಕಾಣುವಳು ಎಂಬ ಹಾಡಿಗೆ ಥೇಟ್ ಕುಡುಕರಂತೆ ಉಪನ್ಯಾಸಕ ಸ್ಟೆಪ್ ಹಾಕುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಠ ಪ್ರವಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಉಪನ್ಯಾಸಕ ಹೀಗೆ ಮಕ್ಕಳೊಂದಿಗೆ ನೃತ್ಯ ಮಾಡಿರುವುದು ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಜೊತೆಗೆ ಉಪನ್ಯಾಸಕ ಮಂಜುನಾಥ್‍ಗೆ ವಿರಹ ವೇದನೆ ಕಾಡುತ್ತಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಎನ್‍ಎಸ್‍ಎಸ್ ಶಿಬಿರದ ನೃತ್ಯ ವೈರಲ್ ಆಗಿದ್ದು, ಉಪನ್ಯಾಸಕನ ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವು ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.