ಜಕಾರ್ತಾ: ಶಾಲಾ ನಿಯಮವನ್ನು ಉಲ್ಲಂಘಿಸಿ ಸ್ಮಾರ್ಟ್‍ಫೋನ್ ಬಳಸುತ್ತಿದ್ದ ವಿದ್ಯಾರ್ಥಿಗಳ ಫೋನ್‍ಗಳನ್ನು ಶಿಕ್ಷಕರು ಬೆಂಕಿಗೆ ಎಸೆದು ಸುಟ್ಟಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ವಿಚಾರಗಳು ಕೈ ಮೀರಿದರೆ ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮತ್ತೆ ಈ ರೀತಿಯ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಫೋನ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಮೊಬೈಲ್ ನಿರ್ಬಂಧಿಸಿದ್ದರೂ ವಿದ್ಯಾರ್ಥಿಗಳು ಕದ್ದುಮುಚ್ಚಿ ಫೋನ್ ಬಳಸುತ್ತಾರೆ. ಇದಕ್ಕೆ ಕೆಲವು ಶಿಕ್ಷಕರು ಮೊಬೈಲ್ ಫೋನ್ ಕಿತ್ತುಕೊಂಡು ಕೆಲವು ಗಂಟೆಗಳ ಕಾಲ ಅಥವಾ ಹಲವಾರು ದಿನಗಳವರೆಗೂ ಹಿಂದಿರುಗಿಸದೇ ಶಿಕ್ಷೆ ನೀಡುತ್ತಾರೆ. ಇದನ್ನೂ ಓದಿ: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ: ಸಿಎಂ
Advertisement
View this post on Instagram
Advertisement
ಆದರೆ ಇತ್ತೀಚೆಗಷ್ಟೇ ಮೊಬೈಲ್ ಫೋನ್ ಬಳಸುತ್ತಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ವಿಭಿನ್ನ ರೀತಿಯಲ್ಲಿ ಶಿಕ್ಷೆ ನೀಡಿದ್ದಾರೆ. ಹೌದು ಇಂಡೋನೇಷ್ಯಾದಲ್ಲಿ ಶಾಲಾ ಶಿಕ್ಷಕರ ಗುಂಪೊಂದು ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಸ್ಮಾರ್ಟ್‍ಫೋನ್‍ಗಳನ್ನು ಬೆಂಕಿಗೆ ಎಸೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮನವಿ ಮಾಡುತ್ತಾ ಅಳುತ್ತಿದ್ದರೂ ಶಿಕ್ಷಕರು ಮೊಬೈಲ್‍ಗಳನ್ನು ಬೆಂಕಿಗೆ ಹಾಕುವುದನ್ನು ಮುಂದುವರೆಸುತ್ತಾರೆ. ಸದ್ಯ ಈ ವೀಡಿಯೋ ಟಿಕ್‍ಟಾಕ್, ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?