ಜೈಪುರ: ಶಿಕ್ಷಕ ವೃತ್ತಿಯನ್ನು ಬಿಟ್ಟು ಝೊಮ್ಯಾಟೊ ಬಾಯ್ ಆದ ವ್ಯಕ್ತಿಯೊಬ್ಬರ ಜೀವನ ಕಥೆಯನ್ನು ವೀಡಿಯೋ ಮಾಡಿ ಟ್ವಿಟ್ಟರ್ ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶಿಕ್ಷಕನೊಬ್ಬ ಝೊಮ್ಯಾಟೊ ಬಾಯ್ ಆದ ಕಥೆಯೇ ರೋಚಕ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕ ತನ್ನ ವೃತ್ತಿಗೆ ರಾಜೀನಾಮೆ ನೀಡಿ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಬೈಕ್ ತೆಗೆದುಕೊಳ್ಳಲು ಹಣವಿಲ್ಲದೇ ಸೈಕಲ್‍ನಲ್ಲೇ ಫುಡ್ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿಕೊಂಡಿರುತ್ತಾರೆ. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್
Advertisement
ಝೊಮ್ಯಾಟೊ ಡೆಲಿವರಿ ಬಾಯ್ ದುರ್ಗ ಮೀನಾಳ್ ಸಂಕಷ್ಟ ಹಾಗೂ ಕಾಯಕ ನಿಷ್ಠೆಯನ್ನು ಕಂಡ ಟ್ವಿಟ್ಟರ್ ಬಳಕೆದಾರ ಆದಿತ್ಯ ಶರ್ಮಾ ಅವರು ಒಂದು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
Advertisement
ಕೆಲವರು ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕರಿಂದ ಸ್ಫೂರ್ತಿ ಪಡೆದರೆ, ಕೆಲವರು ಸಹಾಯ ಹಸ್ತ ಚಾಚಿದ್ದಾರೆ. ಡೆಲಿವರಿ ಬಾಯ್‍ಗಾಗಿ ಕ್ರೌಡ್ ಫಂಡಿಂಗ್ ಪ್ರಾರಂಭವಾಯಿತು. ಇಂಟರ್‍ನೆಟ್ ಬಳಕೆದಾರರು ಆ ವ್ಯಕ್ತಿಯ ಕಠಿಣ ಪರಿಶ್ರಮಕ್ಕಾಗಿ ಅಪಾರ ಪ್ರೀತಿ ಮತ್ತು ಧನ ಸಹಾಯ ಮಾಡಿದ್ದಾರೆ. ಸಾರ್ವಜನಿಕರ ನೆರವಿನಿಂದ ವ್ಯಕ್ತಿಯು ಈಗ ಬೈಕ್ ಖರೀದಿಸಲು ಸಾಧ್ಯವಾಯಿತು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ
Advertisement
ಈ ಕಥೆ ರಾಜಸ್ಥಾನದ ದುರ್ಗಾ ಮೀನಾಳ್ ಅವರದ್ದು. ದುರ್ಗ ಕಳೆದ 4 ತಿಂಗಳಿಂದ ಝೊಮ್ಯಾಟೊದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹೊಡೆತದಿಂದ ಅವರು ಶಿಕ್ಷಕ ವೃತ್ತಿ ಕಳೆದುಕೊಳ್ಳುತ್ತಾರೆ. ನಂತರ ಅವರು ಝೊಮ್ಯಾಟೊನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾನುವಾರ ಟ್ವಿಟರ್ ಬಳಕೆದಾರರಾದ ಆದಿತ್ಯ ಶರ್ಮಾ ಅವರು ದುರ್ಗರವರ ಕುರಿತು ವೀಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಸುಡುವ ಬಿಸಿಲಿನಲ್ಲೂ ಸೈಕಲ್ ತುಳಿದು ಸಮಯಕ್ಕೆ ಸರಿಯಾಗಿ ಆರ್ಡರ್‍ಗಳನ್ನು ತಲುಪಿಸುವ ಅವರ ಪರಿಶ್ರಮವನ್ನು ವೀಡಿಯೋದಲ್ಲಿ ಚಿತ್ರಿಸಿದ್ದಾರೆ. ಇದರೊಂದಿಗೆ ದುರ್ಗ ಅವರ ಅಧ್ಯಯನ ಮತ್ತು ಕೊರೊನಾ ಅವರ ಮೇಲೆ ಬೀರಿದ ಪರಿಣಾಮದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಆದಿತ್ಯ ಅವರ ಈ ಟ್ವೀಟ್, ಟ್ವಿಟ್ಟರ್‍ನಲ್ಲಿ ಬಹು ಬೇಗನೇ ವೈರಲ್ ಆಗಿದೆ. ದುರ್ಗ ಅವರ ಸಹಾಯಕ್ಕೆ ಜನ ಮುಂದೆ ಬರತೊಡಗಿದ್ದು, ಕ್ರೌಡ್ ಫಂಡಿಂಗ್ ಮೂಲಕ ಸುಮಾರು 1.90 ಲಕ್ಷ ರೂ. ಧನ ಸಹಾಯ ಹರಿದುಬಂದಿದೆ.
ಈ ಹಣದಲ್ಲಿ ಮೊದಲು ಬೈಕ್ ಖರೀದಿಸುತ್ತೇನೆ. ಉಳಿದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತೇನೆ ಎಂದು ದುರ್ಗ ಅವರು ತಿಳಿಸಿದ್ದಾರೆ. ಅಂತರ್ಜಾಲದ ಬಳಕೆದಾರರಿಂದ ಪಡೆದ ಧನ ಸಹಾಯದಿಂದ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.