ಚಾಮರಾಜನಗರ: ಇಂದಿನಿಂದಲೇ ಶಿಕ್ಷಕರ ವರ್ಗಾವಣೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿಕ್ಷಕರ ವರ್ಗಾವಣೆಯಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದವು. ಹೀಗಾಗಿ ವರ್ಗಾವಣೆಯನ್ನು ಎರಡು ದಿನಗಳ ಕಾಲ ತಡೆ ಹಿಡಿಯಲಾಗಿತ್ತು. ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ಗೊಂದಲ ಬಗೆಹರಿದಿದೆ. ಶಿಕ್ಷಕರ ಅನುಕೂಲ ಹಾಗೂ ಶಾಲೆಯ ಸಮರ್ಪಕ ನಿರ್ವಹಣೆಗೆ ವರ್ಗಾವಣೆ ಮಾಡಲಾಗುತ್ತಿದೆ. ಒಂದು ವೇಳೆ ಶಿಕ್ಷಕರು ವರ್ಗಾವಣೆ ಮಾಡಬೇಡಿ ಎಂದು ಹೇಳುವುದಕ್ಕೆ ಗಂಭೀರವಾದ ಕಾರಣ, ಮಾನವೀಯತೆ, ಆಡಳಿತಾತ್ಮಕ ಕಾರಣಗಳನ್ನು ಹೊಂದಿರಬೇಕು. ಆ ಕಾರಣಗಳನ್ನು ಬಿಓ ಮೂಲಕ ಆನ್‍ಲೈನ್ ಅಲ್ಲಿ ನಮಗೆ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.
Advertisement
Advertisement
ಬಿಓಗಳಿಗೆ ಮೊದಲೇ ಎಚ್ಚರಿಕೆಯನ್ನು ನೀಡಿದ್ದೇನೆ. ಈಗಲೂ ಕೂಡ ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಒಂದು ಸಣ್ಣ ತಪ್ಪನ್ನು ಮಾಡದೇ ಇಲಾಖೆಗೆ ತಿಳಿಸಬೇಕು. ಲೋಪ ಎಸಗಿದರೆ ಬಿಓಗಳನ್ನು ಸ್ಥಳದಲ್ಲಿ ಅಮಾನತು ಮಾಡುತ್ತೇನೆ ಎಂದು ತೀವ್ರವಾಗಿ ಎಚ್ಚರಿಕೆಯನ್ನು ನೀಡಿದರು.
Advertisement
ಈಗಾಗಲೇ ಶಿಕ್ಷಕರ ವರ್ಗಾವಣೆಗೆ 2 ಸಾವಿರ ತಿರಸ್ಕಾರಗಳು ಬಂದಿದೆ. ಅದರಲ್ಲಿ 100-150 ಶಿಕ್ಷಕರ ವರ್ಗಾವಣೆ ಬೇಡವೆಂದು ಗಂಭೀರವಾದ ಕಾರಣಗಳನ್ನು ಹೊಂದಿದೆ. ಮಾನವೀಯತೆಯಿಂದ ಸ್ವೀಕರಿಸಿ ಇನ್ನುಳಿದ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡುತ್ತೇವೆ. ವರ್ಗಾವಣೆ ಇಂದಿನಿಂದಲೇ ಶುರುವಾಗುತ್ತೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv