ನೋಮ್ ಪೆನ್: ಅದೆಷ್ಟೋ ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಡತನಕ್ಕೆ ತಮ್ಮ ನೂರಾರು ಕನಸುಗಳನ್ನು ಬಲಿಕೊಟ್ಟಿದ್ದಾರೆ. ಆದರೆ ಕಾಂಬೋಡಿಯಾದಲ್ಲಿ ರೈತರೊಬ್ಬರು ತಮ್ಮ ಮಗನ ಶಾಲಾ ಬ್ಯಾಗ್ ಖರೀದಿಸಲು ಹಣವಿಲ್ಲದೆ ತಾವೇ ಸ್ವತಃ ಒಂದು ಸುಂದರ ಬ್ಯಾಗ್ ತಯಾರಿಸಿ ಎಲ್ಲೆಡೆ ಸುದ್ದಿಯಾಗಿದ್ದಾರೆ.
ಮಕ್ಕಳ ಉತ್ತಮ ಭವಿಷ್ಯಕ್ಕೆ ಅವರಿಗೆ ಶಿಕ್ಷಣ ಕೊಡಿಸುವ ಹೊಣೆ ಪೋಷಕರ ಮೇಲೆ ಇರುತ್ತದೆ. ಆದರೆ ಬಡತನ ಕೆಲವೊಮ್ಮೆ ಅದಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಹಲವು ಮಕ್ಕಳು ಬಡತನದಿಂದ ತಮ್ಮ ಕನಸನ್ನು ಬಲಿಕೊಡಬೇಕಾಗುತ್ತದೆ. ಆದರೆ ಕಾಂಬೋಡಿಯಾದ ರೈತರೊಬ್ಬರು ಬಡತನವಿದ್ದರೂ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೆ ಮಗನ ಓದಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಷ್ಟು ಹಣ ಅವರ ಬಳಿ ಇಲ್ಲ. ಆದರೆ ತಮ್ಮ ಮಗ ಶಿಕ್ಷಣ ಪಡೆಯುವುದು ಮುಖ್ಯವೆಂದು ಸ್ವತಃ ತಾವೇ ವಿಶೇಷವಾಗಿ ಬ್ಯಾಗ್ ತಯಾರಿಸಿ ಮಗನಿಗೆ ನೀಡಿದ್ದಾರೆ.
Advertisement
Advertisement
ಈ ಬ್ಯಾಗ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು. ಅಂತ ವಿಶೇಷತೆ ಏನಿದೆಪ್ಪ ಈ ಬ್ಯಾಗ್‍ನಲ್ಲಿ ಎಂದು ಪ್ರಶ್ನೆಹುಟ್ಟುವುದು ಸಹಜ. ತಂದೆಯೊಬ್ಬರು ತನ್ನ ಮಗನಿಗೆ ಶಾಲಾ ಬ್ಯಾಗ್ ಕೊಡಿಸಲು ಆಗದಿದ್ದರೂ ಸ್ವತಃ ತಾವೇ ರಾಫೀಯಾ ಸ್ಟ್ರಿಂಗ್(ಪ್ಲಾಸ್ಟಿಕ್ ಹಗ್ಗ) ಬ್ಯಾಗ್ ತಯಾರಿಸಿದ್ದಾರೆ. ಬೇರೆ ಮಕ್ಕಳನ್ನು ನೋಡಿ ತನ್ನ ಬಳಿ ಬ್ಯಾಗ್ ಇಲ್ಲವೆಂದು ಮಗ ಬೇಸರಪಡಬಾರದು ಎಂದು ತಂದೆ ಈ ಉಪಾಯ ಮಾಡಿದ್ದಾರೆ. ಇವರು ವಾಸಿಸುವ ಪ್ರದೇಶದಲ್ಲಿ ಶಾಲಾ ಬ್ಯಾಗ್ ದುಬಾರಿಯಾಗಿತ್ತು. ಅಲ್ಲದೆ ಅಷ್ಟು ಹಣವನ್ನು ರೈತ ಬರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬ್ಯಾಗ್‍ಗೆ ಖರ್ಚು ಮಾಡುವ ಹಣವನ್ನು ಉಳಿಸಲು ಪ್ಲಾಸ್ಟಿಕ್ ಹಗ್ಗವನ್ನು ಬಳಸಿ ಬ್ಯಾಗ್ ತಯಾರಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
Advertisement
Advertisement
ವಿದ್ಯಾರ್ಥಿ ವೈ.ಎನ್ ಕೆಂಗ್(5) ತನ್ನ ತಂದೆ ತಯಾರಿಸಿದ ಈ ಬ್ಯಾಗ್ ಧರಿಸಿ ಶಾಲೆಗೆ ಹೋಗಿದ್ದನು. ಈ ವೇಳೆ ಶಿಕ್ಷಕಿ ಬ್ಯಾಗ್ ನೋಡಿ ಎಲ್ಲಿ ಖರೀದಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಆಗ ನನ್ನ ತಂದೆ ಈ ಬ್ಯಾಗ್ ತಯಾರಿಸಿದ್ದು ಎಂದನು. ಆದ ವಿದ್ಯಾರ್ಥಿಯ ಬಡತನ ಕಂಡು ಶಿಕ್ಷಕಿ ಈ ಬ್ಯಾಗ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬ್ಯಾಗ್ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದು, ತಂದೆ ಉಪಾಯವನ್ನು ಮೆಚ್ಚಿದ್ದಾರೆ. ಅಲ್ಲದೆ ಹಲವರು ಈ ಬದ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.
https://www.facebook.com/alway.smile.758/posts/1380883075412376
ವಿಶ್ವಸಂಸ್ಥೆಯ ವರದಿ ಪ್ರಕಾರ ಸುಮಾರು 60 ದಶಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಬಡತನದ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ಈ ತಂದೆಯ ಉಪಾಯ ಎಲ್ಲರ ಮನ ಗೆದ್ದಿದ್ದು, ಸದ್ಯ ಈ ವಿಶೇಷ ಬ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.