ಬೆಂಗಳೂರು: ಗಣಿತ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚನ್ನೇಗೌಡ ಬೆತ್ತಲೆ ಫೋಟೋ ಕಳುಹಿಸಿದ ಶಿಕ್ಷಕ. ಚನ್ನೇಗೌಡ ಮೂಲತಃ ಮಂಡ್ಯದವನಾಗಿದ್ದು, ತನ್ನ ವಿದ್ಯಾರ್ಥಿಯ ಫೋನ್ ನಂಬರ್ ಪಡೆದು ಬೆತ್ತಲೆ ಫೋಟೋವನ್ನು ಕಳುಹಿಸಿದ್ದಾನೆ. ತನ್ನ ಶಿಕ್ಷಕನ ಹೊಸ ಅವತಾರ ಕಂಡು ಹಳೆ ವಿದ್ಯಾರ್ಥಿನಿ ಕಂಗಾಲಾಗಿದ್ದಾಳೆ.
Advertisement
Advertisement
ವಿದ್ಯಾರ್ಥಿನಿ ತುಮಕೂರಲ್ಲಿ 9ನೇ ಕ್ಲಾಸ್‍ನಲ್ಲಿ ಓದುವ ವೇಳೆ ಚನ್ನೇಗೌಡ ಗಣಿತ ವಿಷಯ ಹೇಳಿಕೊಡುತ್ತಿದ್ದನು. ನಂತರ ಯುವತಿ ಮದುವೆ ಆಗಿ ಬೆಂಗಳೂರಿನ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಚನ್ನೇಗೌಡ ಅದು ಹೇಗೋ ಯುವತಿ ಫೋನ್ ನಂಬರ್ ಪಡೆದಿದ್ದಾನೆ.
Advertisement
Advertisement
ಯುವತಿಯ ಫೋನ್ ನಂಬರ್ ಪಡೆದ ಚನ್ನೇಗೌಡ ಚಾಟ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೋ ಕಳುಹಿಸಿ ಹೇಗಿದೆ ನೋಡಿ ಹೇಳು ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ನೋಡಿದ ಯುವತಿ ತನ್ನ ಪತಿಯ ಮೂಲಕ ಚನ್ನೇಗೌಡನ ವಿರುದ್ಧ ದೂರು ನೀಡಿದ್ದಾಳೆ.
ಗಣಿತ ಶಿಕ್ಷಕ ಚನ್ನೇಗೌಡ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv