ಬೆಂಗಳೂರು: ಶಿಕ್ಷಕಿಯೊಬ್ಬರು ಪ್ರಾಂಶುಪಾಲನ ಟಾರ್ಚರ್ ನಿಂದಾಗಿ ಶಾಲೆ ಬಿಟ್ಟು, ಶಾಲೆಯ ಮುಂದೆ ಪುಟ್ಟದಾದ ಅಂಗಡಿ ಹಾಕಿಕೊಂಡು ಬದುಕು ಶುರು ಮಾಡಿದ್ದರು. ಆದರೆ ಶಿಕ್ಷಕಿಯ ಪ್ರೀತಿಯ ವಿದ್ಯಾರ್ಥಿಗಳನ್ನು ಉಪಯೋಗಿಸಿಯೇ ಪ್ರಾಂಶುಪಾಲ ಆಕೆಯ ಬದುಕಿಗೆ ಕೊಳ್ಳಿ ಇಡಲು ರೆಡಿಯಾಗಿದ್ದಾನೆ.
ಹೊಗಸಂದ್ರದ ಆಕ್ಸ್ ಫರ್ಡ್ ಸ್ಕೂಲ್ ನ ಪ್ರಾಂಶುಪಾಲ ಸೋಮಶೇಖರ್ ಶಿಕ್ಷಕಿಗೆ ಟಾರ್ಚರ್ ಕೊಡುತ್ತಿದ್ದಾನೆ. ಈ ಶಾಲೆಯಲ್ಲಿ ಐದು ವರ್ಷದಿಂದ ವಿಜಯ ಶಿಕ್ಷಕಿಯಾಗಿದ್ದರು. ಎಲ್ಲ ಮಕ್ಕಳ ಪ್ರೀತಿಯ ಟೀಚರ್ ಕೂಡ ಆಗಿದ್ದರು. ಆದರೆ ಪ್ರಾಂಶುಪಾಲರ ಕಿರಿಕ್ ಮತ್ತು ಸಂಬಳ ಕೊಡದೆ ಸತಾಯಿಸುತ್ತಿದ್ದರಿಂದ ಶಿಕ್ಷಕ ವೃತ್ತಿ ಬಿಟ್ಟು ಸ್ಕೂಲ್ ಮುಂದೆ ಅಂಗಡಿ ಹಾಕಿಕೊಂಡಿದ್ದರು.
Advertisement
Advertisement
ಪತಿ ನಿಧನವಾಗಿದ್ದರಿಂದ ನನ್ನ ಮಗುವನ್ನು ಸಾಕುವ ಜವಾಬ್ದಾರಿ ಇತ್ತು. ಆದರೆ ಈ ಶಾಲೆಯ ಪ್ರಾಂಶುಪಾಲ ಮತ್ತೆ ಕಾಡಲು ಶುರುಮಾಡಿದ್ದಾನೆ. ಮಧ್ಯಾಹ್ನ, ಸಂಜೆ ಶಾಲೆ ಬಿಡುವ ಸಮಯದಲ್ಲಿ ಈ ಅಂಗಡಿಯ ಮುಂದೆ ಹತ್ತು ವಿದ್ಯಾರ್ಥಿಗಳನ್ನು ಸಾಲಾಗಿ ಕಾವಲಿಗೆ ನಿಲ್ಲಿಸಿ ಅಂಗಡಿಗೆ ಯಾವ ಮಕ್ಕಳು ಬಾರದಂತೆ ತಡೆಯುವ ಕೆಲಸ ಮಾಡುತ್ತಿದ್ದಾನೆ ಎಂದು ಶಿಕ್ಷಕಿ ವಿಜಯ ಅವರು ತಿಳಿಸಿದ್ದಾರೆ.
Advertisement
ನಮಗೆ ಈ ಮಿಸ್ ಕಂಡರೆ ತುಂಬಾ ಇಷ್ಟ. ಶಾಲೆ ಬಿಟ್ಟ ಮೇಲೆ ಈ ಅಂಗಡಿ ಹಾಕಿದ್ದಾರೆ. ಅದಕ್ಕೆ ಮಿಸ್ ನ ಮಾತಾನಾಡಿಸಲು ಬಂದೆ ಅಷ್ಟೆ. ಆದರೆ ಐದಾರು ಜನ ಬಂದು ನನ್ನ ಕೈ-ಕಾಲು ಹಿಡ್ಕೊಂಡು ದರ ದರನೇ ಎಳೆದುಕೊಂಡು ಹೋದರು ಎಂದು 5ನೇ ತರಗತಿಯ ಬಾಲಕಿಯೊಬ್ಬಳು ಪಬ್ಲಿಕ್ ಟಿವಿ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾಳೆ.
Advertisement
ಈ ಬಗ್ಗೆ ವರದಿ ಮಾಡುವುದಕ್ಕೆ ಹೋಗಿದ್ದ ಮಾಧ್ಯಮದವರ ಕ್ಯಾಮೆರಾ ಕಿತ್ತುಕೊಳ್ಳಲು ಪ್ರಾಂಶುಪಾಲ ಮುಂದಾಗಿದ್ದಾನೆ. ಓದುವ ಮಕ್ಕಳನ್ನು ತನ್ನ ವೈಯಕ್ತಿಕ ದ್ವೇಷಕ್ಕಾಗಿ ಅಂಗಡಿ ಮುಂದೆ ಗಂಟೆಗಟ್ಟಲೆ ಕಾವಲು ನಿಲ್ಲಿಸುವ ಈ ಪ್ರಾಂಶುಪಾಲನ ವಿರುದ್ಧ ಸೂಕ್ತ ಕ್ರಮವನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv