ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಕತ್ತನ್ನು ಚಾಕುವಿನಿಂದ ಕೊಯ್ದು ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮೃತರು ದೆಹಲಿಯ ಮೆಹ್ರೌಲಿ ನಿವಾಸಿಗಳಾಗಿದ್ದು, ವ್ಯಕ್ತಿ ಎರಡು ತಿಂಗಳ, ಐದು ಮತ್ತು ಆರು ವರ್ಷದ ತನ್ನ ಮಕ್ಕಳನ್ನು ಕೊಲೆ ಮಾಡಿದ್ದಾನೆ. ಜೊತೆಗೆ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement 2-
DCP South Delhi: Upendra Shukla was staying in Mehrauli with his family and used to give private tuition. He murdered his wife and 3 children by slitting their throats.The knife used for committing the murders has been recovered.He has written a note admitting to the crime #Delhi pic.twitter.com/oj0BpJqWWS
— ANI (@ANI) June 22, 2019
- Advertisement 3-
ಆರೋಪಿಯನ್ನು ಉಪೇಂದ್ರ ಶುಕ್ರಾ ಎಂದು ಗುರುತಿಸಲಾಗಿದೆ. ಆರೋಪಿ ಖಾಸಗಿ ಟ್ಯೂಷನ್ ಮಾಡಿಕೊಂಡು ಕುಟುಂಬದೊಂದಿಗೆ ಮೆಹ್ರೌಲಿಯಲ್ಲಿ ವಾಸಿಸುತ್ತಿದ್ದನು. ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆ ಈ ಘಟನೆ ನಡೆದಿದೆ. ಈ ಪ್ರಕರಣದ ಬಗ್ಗೆ ಆರೋಪಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
- Advertisement 4-
ಆರೋಪಿ ಶುಕ್ರಾ ತಾಯಿ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ಮುಂಜಾನೆ ಆದರೂ ಮಕ್ಕಳು ಮತ್ತು ಆರೋಪಿ ಶುಕ್ರಾ ಎದ್ದಿರಲಿಲ್ಲ. ಬಾಗಿಲನ್ನು ಎಷ್ಟೇ ಬಡಿದರೂ ಯಾರೊಬ್ಬರು ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡ ತಾಯಿ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.
DCP South Delhi: The man who murdered his wife and three children in Mehrauli today, has been arrested. pic.twitter.com/epujQwepCb
— ANI (@ANI) June 22, 2019
ಈಗಾಗಲೇ ಇಂದು ಬೆಳಿಗ್ಗೆ ಉಪೇಂದ್ರನನ್ನು ಬಂಧಿಸಲಾಗಿದೆ. ಕೊಲೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದೇವೆ. ಆದರೆ ಈ ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಆರೋಪಿ ಶುಕ್ಲಾ ಮಾನಸಿಕ ಅಸ್ವಸ್ಥನಾಗಿದ್ದು, ಖಿನ್ನತೆಗೆ ಒಳಗಾಗಿದ್ದನು ತಿಳಿದು ಬಂದಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಇತ್ತ ಬಂಧಿತ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]