ಬೆಂಗಳೂರು: ದುಷ್ಕರ್ಮಿಗಳು ನಿವೃತ್ತ ಶಿಕ್ಷಕಿಯೊಬ್ಬರನ್ನು ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿ (Bengaluru) ಯಲ್ಲಿ ನಡೆದಿದೆ.
ಪ್ರಸನ್ನ ಕುಮಾರಿ(60) ಕೊಲೆಯಾದ ನಿವೃತ್ತ ಶಿಕ್ಷಕಿ (Teacher). ವಿಜಯವಾಡ ಮೂಲದ ಪ್ರಸನ್ನ ಕುಮಾರಿ ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು, ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ರೈತನ ಬಗ್ಗೆ ಹಗುರ, ಅವಾಚ್ಯ ಪದ ಬಳಸಿದ ಕೆ.ಬಿ ಕೋಳಿವಾಡ
ವಿದ್ಯಾರಣ್ಯಪುರ ಅಂಬಾ ಭವಾನಿ ದೇವಸ್ಥಾನದ ಬಳಿ ನೆಲೆಸಿದ್ದ ಇವರ ಮನೆಗೆ ದುಷ್ಕರ್ಮಿಗಳು ನಿನ್ನೆ ತಡರಾತ್ರಿ ನುಗ್ಗಿ ಕೊಲೆ ಮಾಡಿದ್ದಾರೆ. ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ಚಿನ್ನಾಭರಣ ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ
ಸದ್ಯ ಆರೋಪಿಗಳಿಗಾಗಿ ವಿದ್ಯಾರಣ್ಯಪುರ (Vidyaranyapura) ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇಬ್ಬರು ದುಷ್ಕರ್ಮಿಗಳಿಂದ ಆಸ್ತಿ (Property) ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಸಿಸಿಟಿವಿ (CCTV) ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು (Police) ಬಲೆ ಬೀಸಿದ್ದಾರೆ.