ಕೋಲಾರ: 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನೋರ್ವ ಅನುಚಿತವಾಗಿ ವರ್ತಿಸಿರುವ ಘಟನೆ ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಕನ್ನಡ ಶಿಕ್ಷಕ ಪ್ರಕಾಶ್ ವಿರುದ್ಧ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಶಿಕ್ಷಕ ಪ್ರಕಾಶ್, ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಹನಿಮೂನ್ ಹೇಗಿರುತ್ತೆ ಎಂದು ಪ್ರಶ್ನೆ ಮಾಡುತ್ತಿದ್ದ. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರ ಮೈ ಮುಟ್ಟಿ ಮಾತನಾಡುವುದು ಅಶ್ಲೀಲವಾಗಿ ವರ್ತಿಸುವುದು ಮಾಡುತ್ತಿದ್ದನೆಂಬ ಆರೋಪಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು ಶಾಲೆಯಲ್ಲಿ ಸಭೆ ಮಾಡಿ ಶಿಕ್ಷಕ ಪ್ರಕಾಶ್‍ಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣಯ್ಯ ಅವರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಶಾಲಾ ಆಡಳಿತ ಮಂಡಳಿಯಿಂದ ವರದಿ ಪಡೆದಿದ್ದಾರೆ.
Advertisement
Advertisement
ಶಿಕ್ಷಕ ಪ್ರಕಾಶ್ ಈ ಹಿಂದೆ ಕೆಲಸ ಮಾಡಿದ್ದ ಶಾಲೆಯಲ್ಲೂ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ. 2010ರಲ್ಲಿ ನರಸಾಪುರ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ್ದ ಆರೋಪದ ಮೇರೆಗೆ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು. ಅದಾದ ಬಳಿಕ ಕುರಗಲ್ ಗ್ರಾಮದಲ್ಲೂ ಅದೇ ಚಟವನ್ನು ಮುಂದುವರಿಸಿದ್ದ. ಬಳಿಕ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಶಾಲೆಯಲ್ಲೂ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್
Advertisement
Advertisement
ಇಷ್ಟಾದರೂ ಶಿಕ್ಷಕ ಪ್ರಕಾಶ್ ತನ್ನ ವರ್ತನೆ ಬದಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪೋಷಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಸೇವೆಯಿಂದ ಬಿಇಒ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಸರಿಯಾಗಿ ಮೇಕಪ್ ಮಾಡ್ಲಿಲ್ಲ ಅಂತ ಬ್ಯೂಟಿ ಪಾರ್ಲರ್ ವಿರುದ್ಧ ವಧು ಕೇಸ್