ಲಕ್ನೋ: ಮುಸ್ಲಿಂ ಸಮುದಾಯಕ್ಕೆ (Muslim Community) ಸೇರಿದ ಶಿಕ್ಷಕಿಯೊಬ್ಬರಿಗೆ (Teacher) ವಿದ್ಯಾರ್ಥಿಗಳು ಬಹಿರಂಗವಾಗಿ `ಐ ಲವ್ ಯು’ (ILoveYou) ಹೇಳಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಅಡಿಯಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ (UttarPradesh) ನಡೆದಿದೆ.
ಮೀರತ್‌ನ ರಾಮಮನೋಹರ ಲೋಹಿಯಾ ಇಂಟರ್‌ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ತಾವು ಶಿಕ್ಷಕಿಗೆ ಕಿರುಕುಳ ನೀಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಶಿಕ್ಷಕಿಯನ್ನು ಮೇರಿ ಜಾನ್, ಐ ಲವ್ ಯು ಎಂದು ಹೇಳುತ್ತಿರುವುದು ವೀಡಿಯೋನಲ್ಲಿ ಸೆರೆಯಾಗಿದೆ.
Advertisement
Advertisement
ಪೊಲೀಸರ (Police) ಪ್ರಕಾರ, 27 ವರ್ಷದ ಶಿಕ್ಷಕಿ 12ನೇ ತರಗತಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದು, ಹಲವು ದಿನಗಳಿಂದ ತಮಗೆ ಕಿರುಕುಳ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನೀನು ಸುಳ್ಳುಗಾರ್ತಿ ಎಂದ ಶಿಕ್ಷಕಿ- ಮನನೊಂದು ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ
Advertisement
ಶಾಲೆಗೆ ಬರುವಾಗ, ಮನೆಗೆ ಹೋಗುವಾಗ ವಿದ್ಯಾರ್ಥಿಗಳು ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಪೋಷಕರಿಗೆ ಈ ಬಗ್ಗೆ ತಿಳಿಸಿ ಹೇಳಿದ್ದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ
Advertisement
ಕಳೆದ ಜೂನ್ 24ರಂದು ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಮಿತಿ ಮೀರಿ ವರ್ತಿಸಿ ನನಗೆ `ಐ ಲವ್ ಯು’ ಹೇಳಿದ್ದಾರೆ. ಅದರ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ ತರಗತಿಯಲ್ಲಿ ನನ್ನ ವಿರುದ್ಧ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಅದನ್ನೂ ಸಹ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಎರಡು ವೀಡಿಯೋಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಿಜಬ್ ಧರಿಸಿದ್ದಕ್ಕೆ ಕಿರುಕುಳ:
ಮೀರತ್‌ನ ರಾಮಮನೋಹರ ಲೋಹಿಯಾ ಇಂಟರ್‌ಕಾಲೇಜಿನಲ್ಲಿ ಮುಸ್ಲಿಂ ಶಿಕ್ಷಕಿಯೊಬ್ಬರು ಶಾಲೆಗೆ ಹಿಜಬ್ ಧರಿಸಿ ಬರುತ್ತಿದ್ದರಿಂದ 12ನೇ ತರಗತಿ ಓದುತ್ತಿದ್ದರುವ ಅಮನ್ ಕೈಫ್ ಹಾಗೂ ಅಮಾಲ್ತಸ್ ಎನ್ನುವ ವಿದ್ಯಾರ್ಥಿಗಳು ಬಹಿರಂಗವಾಗಿ ಶಿಕ್ಷಕಿಗೆ ಕಿರುಕುಳ ನೀಡಿದ್ದಾರೆ. ಆಕೆ ಪಾಠ ಮಾಡುವಾಗ `ಐ ಲವ್ ಯು’ ಎಂದು ಹೇಳಿದ್ದಲ್ಲದೇ ಪ್ರಾರ್ಥನಾ ಸಭೆಯಲ್ಲಿ ಆಕೆ ವಿರುದ್ಧ ಅಶ್ಲೀಲವಾಗಿದೆ ಮಾತನಾಡಿದ್ದಾರೆ.
ಸುಮಾರು 16 ವರ್ಷದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಓರ್ವ ವಿದ್ಯಾರ್ಥಿನಿ ಸೇರಿ ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಮೋಹನ್ ಶರ್ಮಾ ತಿಳಿಸಿದ್ದಾರೆ.