ಜಕಾರ್ತ: ಶಿಕ್ಷಕನೊಬ್ಬನು 13 ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನು ಎಸೆಗಿ 8 ವಿದ್ಯಾರ್ಥಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷ್ಯಾದ ಧಾರ್ಮಿಕ ಬೋರ್ಡಿಂಗ್ ಶಾಲೆಯಲ್ಲಿ ನಡೆದಿದ್ದು, ಆರೋಪಿಯು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಹೆರ್ರಿ ವಿರಾವನ್(36) ಆರೋಪಿ. ಈತ ತನ್ನ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸ್ಕಾಲರ್‍ಶಿಪ್ ಸೇರಿ ಇನ್ನಿತರ ಆಮಿಷ ಒಡ್ಡುತ್ತಿದ್ದ. ಹೀಗಾಗಿ ಸ್ವಲ್ಪ ಬಡವರಾದವರು ತಮ್ಮ ಮಕ್ಕಳನ್ನು ಅಲ್ಲಿಯೇ ಸೇರಿಸಲು ಮುಂದಾಗುತ್ತಿದ್ದರು. ಇದರಿಂದಲೇ ಈ 13 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ್ದು, 8 ವಿದ್ಯಾರ್ಥಿನಿಯರು ಗರ್ಭಿಣಿಯರಾಗಿದ್ದಾರೆ.
2016 ರಿಂದ 2021ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲೂ ತನ್ನ ಆರೈಕೆಯಲ್ಲಿ 13 ರಿಂದ 16ರ ನಡುವಿನ 13 ವಿದ್ಯಾರ್ಥಿನಿಯರ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ಇಷ್ಟಾದರೂ ಇದುವರೆಗೆ ಸಮಾಜಕ್ಕೆ ಹೆದರಿ ಯಾವೊಬ್ಬ ವಿದ್ಯಾರ್ಥಿನಿಯು ಬಾಯಿ ಬಿಟ್ಟಿರಲಿಲ್ಲ. ಜೊತೆಗೆ ತಮ್ಮ ಮಕ್ಕಳು ಗರ್ಭಿಣಿಯಾಗಿ ಮಗು ಹೆತ್ತರೂ ಪಾಲಕರು ಬಹಿರಂಗಗೊಳಿಸಿರಲಿಲ್ಲ. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!
ಆದರೆ ಓರ್ವ ಬಾಲಕಿಯ ಪಾಲಕರು ದೂರು ದಾಖಲಿಸಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದೀಗ ವಿಚಾರಣೆ ನಡೆದು ಹೆರ್ರಿಗೆ ಪಶ್ಚಿಮ ಜಾವಾದ ಬಂಡಂಗ್ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಆದರೆ ಪೋಷಕರು ಈತನಿಗೆ ಮರಣ ದಂಡನೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಕ್ಲಾಸ್‍ಗೆ ಅನುಮತಿ ನೀಡಿ ಎಂದು ವಿದ್ಯಾರ್ಥಿನಿಯರು ಪಟ್ಟು!