ಧಾರವಾಡ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ (Election) ಮತಗಟ್ಟೆ ಅಧಿಕಾರಿಗಳ ತರಬೇತಿ ಮುಗಿಸಿ ಮನೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.
ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ (54) ಮೃತ ಶಿಕ್ಷಕ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಆರ್ಯ ಭಟ್ಟ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಪ್ಪ ಅವರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿದ್ದರು.
Advertisement
Advertisement
ಧಾರವಾಡ ಜೆಎಸ್ಎಸ್ ಕಾಲೇಜಿನಲ್ಲಿ 71- ಧಾರವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಭಾಗವಹಿಸಿದ್ದ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ನೇಮಕಗೊಂಡಿದ್ದ ಶಿಕ್ಷಕ ಮಲ್ಲಪ್ಪ ಭೀಮಪ್ಪ ಸೋನಾರ ಅವರು ತರಬೇತಿ ಮುಗಿಸಿ ಮೆಟ್ಟಿಲು ಇಳಿದು ಮನೆಗೆ ಹೋಗುವ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ
Advertisement
Advertisement
ಶಿಕ್ಷಕ ಸೋನಾರ ಅವರ ಆಕಸ್ಮಿಕ ಸಾವಿಗೆ ಶೋಕ ವ್ಯಕ್ತಪಡಿಸಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ನೆರವು ತಲುಪಿಸಲಾಗುವುದೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ತಾಲಿಬಾನ್ ಸರ್ಕಾರ ರಚನೆಯಾಗುತ್ತೆ: ಪ್ರತಾಪ್ ಸಿಂಹ