ಚಂಡೀಗಢ್: 5 ವರ್ಷದ ಮಗಳ ಮುಂದೆಯೇ ಶಿಕ್ಷಕಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.
ಸರಂಜೀತ್ ಕೌರ್(35) ಕೊಲೆಯಾದ ಶಿಕ್ಷಕಿ. ಏಪ್ರಿಲ್ ತಿಂಗಳಿನಿಂದ ಸರಂಜೀತ್ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯಲ್ಲಿ ಫ್ರೆಂಚ್ ಹಾಗೂ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಗೆ ಬಂದ ಸಂದರ್ಭದಲ್ಲಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಇಂದು ಬೆಳಗ್ಗೆ ಖರಾರ್ ನ ಸನ್ನಿ ಎನ್‍ಕ್ಲೇವ್ ಪ್ರದೇಶದ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯ ಹೊರಗಡೆ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 7.45ಕ್ಕೆ ಸರಂಜೀತ್ ಶಾಲೆಗೆ ಆಗಮಿಸಿ ತನ್ನ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
Advertisement
Advertisement
ವ್ಯಕ್ತಿಯೊಬ್ಬ ಶಾಲು ಹಾಕಿಕೊಂಡು ಬೆಳಗ್ಗೆಯಿಂದ ಶಾಲೆಯ ಬಳಿ ತಿರುಗಾಡುತ್ತಿದ್ದನು. ಶಿಕ್ಷಕಿ ಬರುತ್ತಿದ್ದಂತೆ ಆತ ಅವರ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾರಿನಲ್ಲಿ ಪರಾರಿ ಆಗಿದ್ದಾನೆ ಎಂದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
Advertisement
ಗುಂಡು ಬಿದ್ದ ತಕ್ಷಣ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.