ಚಂಡೀಗಢ: ದಟ್ಟವಾದ ಮಂಜಿನಿಂದ (Dense Fog) ರಸ್ತೆ ಗೋಚರಿಸದೇ ಕಾರು ಕಾಲುವೆಗೆ ಉರುಳಿದ ಪರಿಣಾಮ ಶಿಕ್ಷಕ ದಂಪತಿ (Teacher Couple) ಸಾವನ್ನಪ್ಪಿರುವ ಘಟನೆ ಪಂಜಾಬ್‌ನ (Punjab) ಮೋಗಾ (Moga) ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ದುರ್ಘಟನೆ ಸಂಭವಿದ್ದು, ಜಸ್ ಕರಣ್ ಸಿಂಗ್ ಹಾಗೂ ಪತ್ನಿ ಕಮಲ್‌ಜೀತ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಂಜಾಬ್ ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಂಗತ್‌ಪುರ ಗ್ರಾಮದ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಜಸ್ ಕರಣ್ ಸಿಂಗ್ ತಮ್ಮ ಪತ್ನಿ ಕಮಲಜೀತ್ ಕೌರ್ ಅವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರೀ ಮಂಜಿನಿಂದಾಗಿ, ಮುಂದಿನ ರಸ್ತೆ ಸ್ಪಷ್ಟವಾಗಿ ಗೋಚರಿಸದ ಕಾರಣ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿದ್ದ ಕಾಲುವೆಗೆ ಉರುಳಿ ಬಿದ್ದಿದೆ. ಇದನ್ನೂ ಓದಿ: ದಟ್ಟ ಮಂಜಿನಿಂದ ಕಾಣದ ರಸ್ತೆ; 3 ಕಡೆ 30ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತ; ಹಲವರಿಗೆ ಗಾಯ
ಕಮಲಜೀತ್ ಕೌರ್ ಅವರನ್ನು ಸಂಗತ್‌ಪುರದ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಮಾನ್ಸಾ ಜಿಲ್ಲೆಯ ಮೂಲದ ಜಸ್ ಕರಣ್ ಸಿಂಗ್ ಇಂಗ್ಲಿಷ್ ಶಿಕ್ಷಕರಾಗಿದ್ದರು. ಇಬ್ಬರೂ ಮೋಗಾ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: Ramanagara | ಕಾಡಾನೆ ದಾಳಿಗೆ ರೈತ ಬಲಿ

