ಗದಗ: ಲವ್ವರ್ (Lover) ಬ್ಲ್ಯಾಕ್‌ಮೇಲ್‌ನಿಂದ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಸುಂಡಿ (Asundi) ಗ್ರಾಮದಲ್ಲಿ ನಡೆದಿದೆ.
ಸೈರಾಬಾನು ನದಾಫ್(29) ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿ. ಮದುವೆಗೆ ಇನ್ನೂ ಕೇವಲ 8 ದಿನ ಬಾಕಿ ಇರುವಾಗಲೇ ಸೈರಾಬಾನು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಕೃಷ್ಣದೇವರಾಯನ ಸಮಾಧಿ ಮೇಲೆ ಮಾಂಸ ಮಾರಾಟ: ಯತ್ನಾಳ್ ಆಕ್ರೋಶ
ಭಾನುವಾರ ಸೈರಾಬಾನು ಪೋಷಕರು ಮದುವೆ (Marriage) ಸಾಮಗ್ರಿಗಳನ್ನು ತರಲು ಪೇಟೆಗೆ ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?
ಕಳೆದ 5 ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪೋಷಕರ ಒತ್ತಾಯದ ಮೇರೆಗೆ ಸೈರಾಬಾನು ಬೇರೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಸೈರಾಬಾನು ಮದುವೆ ತಯಾರಿ ನೋಡಿ ಲವರ್ ಮೈಲಾರಿ ಟಾರ್ಚರ್ ಶುರುವಾಗಿತ್ತು. ಬೇರೆ ಮದುವೆ ಆದರೆ ಇಬ್ಬರ ಫೋಟೋ ಹಾಗೂ ವೀಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಆತ ಬೆದರಿಕೆ ಹಾಕ್ತಿದ್ದ ಎಂಬ ಆರೋಪವಿದೆ. ಸೈರಾಬಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಶಂಕ ವ್ಯಕ್ತವಾಗಿದೆ. ಇದನ್ನೂ ಓದಿ: 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ಕೊನೆಯ ಮಗಳು ಎಂದು ಹೆತ್ತವರು ಭರ್ಜರಿಯಾಗಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಮನೆಗೆ ಈಗ ಸೂತಕದ ಛಾಯೆ ಆವರಿಸಿದೆ.
ಸೈರಾಬಾನು, ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು ಆಗಿ ಸಾಕಷ್ಟು ಹೆಸರು ಮಾಡಿದ್ದ ಇವರು ಹತ್ತಾರು ಮೆಡಲ್, ಕಪ್ ಗೆದ್ದುಕೊಂಡಿದ್ದರು. ಗಂಡು ಮಕ್ಕಳಿಲ್ಲದ ಕಾರಣ ಸೈರಾಬಾನು ಇಡೀ ಮನೆ ಜವಾಬ್ದಾರಿಯನ್ನು ಹೊತ್ತಿದ್ದರು. ಇದನ್ನೂ ಓದಿ: PBKS vs RCB – ಕೊಹ್ಲಿ ರನೌಟ್ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಟಾರ್ಚರ್ ನೀಡಿರುವ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದರು. ಇದನ್ನೂ ಓದಿ: ಚಿತ್ರದುರ್ಗ | ಬೆಲೆ ಕುಸಿತ – ಕಟಾವು ಮಾಡದೇ ಹೊಲದಲ್ಲೇ ಟೊಮೆಟೊ ಬಿಟ್ಟ ರೈತರು
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಯ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Gadag Rural Police Station) ಪ್ರಕರಣ ದಾಖಲಾಗಿದೆ.