ಕೊಪ್ಪಳ: ವಾರದಲ್ಲಿ ಎರಡು ದಿನ ಶಾಲೆಯ ಶೌಚಾಲಯ ಶುಚಿಗೊಳಿಸುವ ಶಿಕ್ಷಕರೊಬ್ಬರು ಕೊಪ್ಪಳದಲ್ಲಿದ್ದಾರೆ.
ಕುಕನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಎರಡು ದಿನ ಶಾಲೆಯ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮನೆಯ ಶೌಚಾಲಯವನ್ನೇ ಶುಚಿಗೊಳಿಸಲು ಮೂಗು ಮುರಿಯೋ ಇಂದಿನ ದಿನದಲ್ಲಿ ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಮಾದರಿಯಾಗಿದ್ದಾರೆ.
Advertisement
Advertisement
ಪ್ರತಿವಾರದಲ್ಲಿ ಎರಡು ದಿನ ತಮ್ಮ ಶಾಲೆಯ ಶೌಚಾಲಯವನನ್ನ ಖುದ್ದು ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಶುಚಿಗೊಳಿಸುತ್ತಾರೆ. ಇದು ನಿನ್ನೆ ಮೊನ್ನೆದಲ್ಲ ಕಳೆದ 12 ವರ್ಷಗಳಿಂದ ವೆಂಕಪ್ಪ ಈ ಕಾಯಕದಲ್ಲಿ ತೊಡಗಿದ್ದಾರೆ. ಸ್ವಚ್ಛತೆ ಬಗ್ಗೆ ಭಾಷಣ ಮಾಡುವವರ ಮಧ್ಯೆ ವೆಂಕಪ್ಪ ಅರಕಲ್ ಅವರ ಈ ಮಹಾನ್ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
Advertisement
ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವುದು ನನಗೆ ಹೆಮ್ಮೆ ಹಾಗೂ ಸಂತೋಷ. ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಪಾಠ ಮಾಡಿದರೇನು ಪ್ರಯೋಜನ ನಾವು ಅದನ್ನ ಕಾರ್ಯರೂಪಕ್ಕೆ ತರಬೇಕು ಅನ್ನೋ ಉದ್ದೇಶದಿಂದ ಈ ಕಾಯಕ ಮಾಡಲಾಗುತ್ತಿದೆ ಎಂದು ಶಿಕ್ಷಕ ವೆಂಕಪ್ಪ ಅರಕಲ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews