ಲಕ್ನೋ: ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ಹರ್ದೋಯಿಯ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿಯನ್ನು ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಶಿಕ್ಷಕಿ ಕುರ್ಚಿ ಮೇಲೆ ಕುಳಿತುಕೊಂಡು ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದರೆ, ವಿದ್ಯಾರ್ಥಿ ಪಕ್ಕದಲ್ಲಿ ನಿಂತುಕೊಂಡು ಮಸಾಜ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹಂತಕರನ್ನು ಕೇರಳ ಗಡಿಯವರೆಗೆ ಕಳುಹಿಸಿ ಕೊಟ್ಟಿದ್ದೇವೆ: ಬಂಧಿತ ಆರೋಪಿಗಳು
Advertisement
Teacher having bicep Massage by students, Viral video from Hardoi UP govt school. pic.twitter.com/MF8lEQPvEZ
— Grading News (@GradingNews) July 27, 2022
Advertisement
ಭಾರತದ ಎಲ್ಲಾ ಶಿಕ್ಷಕರಿಗೆ ನಾನು ಮನವಿ ಮಾಡುತ್ತೇನೆ. ದಯವಿಟ್ಟು ವಿದ್ಯಾರ್ಥಿಗಳನ್ನು ಇಂತಹ ವಿಚಾರಗಳಿಗಾಗಿ ಬಳಸಿಕೊಳ್ಳಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಇಂಥವರಿಂದ ಸರ್ಕಾರಿ ಶಾಲೆಗಳಿಗೆ ಕೆಟ್ಟ ಹೆಸರು. ಇಂಥವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಹರ್ದೋಯಿ ಶಾಲೆಯ ಮುಖ್ಯ ಶಿಕ್ಷಣ ಅಧಿಕಾರಿ ಬಿ.ಪಿ. ಸಿಂಗ್ ಅವರು, ಶಿಕ್ಷಕಿ ತಪ್ಪು ಮಾಡಿರುವ ವಿಚಾರ ಸಾಬೀತಾಗಿದ್ದು, ಆಕೆಯನ್ನು ಅಮಾನತು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಜವಾದ ಆರೋಪಿಯನ್ನು ಬಂಧಿಸಿ ನನ್ನ ಪತಿಯನ್ನು ಬಿಟ್ಟುಬಿಡಿ: ಶಫೀಕ್ ಪತ್ನಿ ಅನ್ಶಿಫಾ