ನವದೆಹಲಿ: ಶಾಸಕ ವೇದವ್ಯಾಸ ಕಾಮತ್ (Vedavyas Kamath) ಹಾಗೂ ಭರತ್ ಶೆಟ್ಟಿ (Bharath Shetty) ವಿರುದ್ಧ ಎಫ್‌ಐಆರ್ (FIR) ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದಾರೆ. ಯಾರು ಯಾರ ಮೇಲೆ ದೂರು ನೀಡಿದರೂ ಎಫ್‌ಐಆರ್ ಹಾಕುವುದು ನಿಯಮ. ತನಿಖೆ ನಡೆದ ಮೇಲೆ ಯಾರ ತಪ್ಪು ಗೊತ್ತಾಗಲಿದೆ. ದೂರು ಕೊಟ್ಟು ಶಿಕ್ಷಕಿ ತಮ್ಮ ತಪ್ಪು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ದಾಖಲಿಸಲು ಶಿಕ್ಷಕಿ ಸ್ವತಂತ್ರರು. ಆದರೆ ಶಿಕ್ಷಕಿ ಹಿಂದೂ ಧರ್ಮದ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ನಿರಂತರವಾಗಿ ಇದು ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಂತಹ ಆರೋಪಗಳು ಬಂದಾಗ ಜನಪ್ರತಿನಿಧಿಗಳು ಅಲ್ಲಿಗೆ ಹೋಗಬೇಕಾಗುತ್ತದೆ. ಶಿಕ್ಷಕಿ ದೂರು ನೀಡಿದ ತಕ್ಷಣ ತಾನು ಮಾಡಿದ ತಪ್ಪು ಮುಚ್ಚಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬರಲಿ ಎಂದರು. ಇದನ್ನೂ ಓದಿ: ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಸರ್ಕಾರ ಬ್ರೇಕ್
Advertisement
Advertisement
ಇನ್ನು ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಒಂದು ಸ್ಥಾನ ಗೆದ್ದ ಬಳಿಕ 39 ಮತಗಳು ಉಳಿಯಲಿದೆ. ಎರಡನೇ ಅಭ್ಯರ್ಥಿಗೆ ಆರು ಮತಗಳ ಕೊರತೆ ಇದೆ. ಹಲವು ಕಾರಣಕ್ಕೆ ಹಲವು ಪಕ್ಷದ ನಾಯಕರು ಸ್ನೇಹಿತರಾಗುತ್ತಾರೆ. ಹಾಗಾಗಿ ಆರು ಮತ ಪಡೆಯುವ ವಿಶ್ವಾಸ ಇರಬಹುದು. ಆ ಮತಗಳು ಬಂದ್ರೆ ಗೆಲುವು ಕಷ್ಟ ಅಲ್ಲ. ಈ ಹಿಂದೆ 10-12 ಮತಗಳು ಕೊರತೆ ಇದ್ದಾಗಲೂ ಗೆದ್ದು ಬಂದ ಉದಾಹರಣೆ ಇದೆ. ಈಗ ಆರು ಮತಗಳು ಮಾತ್ರ ಕೊರತೆ ಇದೆ. ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನಲ್ಲಿ ಬಹಳ ಜನ ಸ್ನೇಹಿತರು ಇದ್ದಾರೆ. ಅವರು ಸಹಾಯ ಮಾಡಿದರೆ ಗೆಲ್ಲಬಹುದು ಎಂದು ಹೇಳಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ
Advertisement
Advertisement
ಲೋಕಸಭೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 1995ರ ಬಳಿಕ ನಾನು ಪಕ್ಷದಲ್ಲಿ ಏನೂ ಕೇಳಿ ಪಡೆದುಕೊಂಡಿಲ್ಲ. ಪಕ್ಷದ ತೀರ್ಮಾನ ಕಾರ್ಯಕರ್ತನಾಗಿ ಪಾಲಿಸುತ್ತೇನೆ. ಬಿಜೆಪಿ (BJP) ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ