– ಕಾಲೇಜು ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ
ಕಲಬುರಗಿ: ಇಂಟರ್‍ನಲ್ ಮಾರ್ಕ್ಸ್ ಕೊಡಲು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ, ಕಲಬುರಗಿ ನಗರದ ಎಚ್‍ಕೆಇ ಸಂಸ್ಥೆಯ ಮಲಕರೆಡ್ಡಿ ಹೋಮಿಯೊಪತಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
Advertisement
ಕಾಲೇಜಿನ ಫಿಜಿಯಾಲಾಜಿ ಉಪನ್ಯಾಸಕ ಸಿದ್ದಲಿಂಗ ಮಾಲಿಪಾಟೀಲ್ ಇಂತಹ ಹೀನ ಕೆಲಸ ಮಾಡಿದ್ದಾನೆ. ಇದರಿಂದ ನೊಂದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದಾರೆ.
Advertisement
Advertisement
ನಿತ್ಯ ಮದ್ಯಪಾನ ಮಾಡಿ ಬರುವ ಈ ಕಾಮಿ ಶಿಕ್ಷಕ ಪ್ರತಿ ವಿದ್ಯಾರ್ಥಿನಿಯನ್ನೂ ಸಹ ಕಾಮದ ದೃಷ್ಟಿಯಿಂದ ನೋಡುತ್ತಾನಂತೆ. ಉಪನ್ಯಾಸಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಮೂರು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದ ಶಿಕ್ಷಣ ಸಂಸ್ಥೆ ಕಾಮುಕ ಉಪನ್ಯಾಕನ ವಿರುದ್ಧ ಕ್ರಮ ಜರುಗಿಸಿಲ್ಲ ಎನ್ನುವ ಮಾತು ಕೇಳಿ ಬಂದಿದೆ.