ಮೈಸೂರು: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಶಿಕ್ಷಕನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ತಜಮುಲ್ ಬಂಧಿತ ಆರೋಪಿ. ತಜಮುಲ್ ವೃತ್ತಿಯಲ್ಲಿ ಶಾಲಾ ಶಿಕ್ಷಕ ಎಂದು ತಿಳಿದು ಬಂದಿದೆ. ಮೈಸೂರಿನ ರಾಜೀವ್ ನಗರದಲ್ಲಿ ಇಲಿಯಾಸ್ ಕಾವೇರಿ ಎಂಪೋರಿಯಮ್ ಮಾಲೀಕರಾದ ಇಲಿಯಾಸ್ ಬೇಗ್ ಮನೆಯಲ್ಲಿ ಮದುವೆಗೆ ಇಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಶಿಕ್ಷಕ ಕಳ್ಳತನ ಮಾಡಿದ್ದಾನೆ.
Advertisement
ಆರೋಪಿ ತಜಮುಲ್, ಇಲಿಯಾಸ್ ಬೇಗ್ ಮನೆಯ ಬಳಿ ವಾಸವಾಗಿದ್ದನು. ತಜಮುಲ್ ಮನೆಯ ಕೀ ಮೊದಲೇ ಕಳ್ಳತನ ಮಾಡಿದ್ದನು. ನಂತರ ಮನೆಯವರೆಲ್ಲಾ ಹೊರಗೆ ಹೋದಾಗ ಕೀ ಬಳಸಿ ಕಳ್ಳತನ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
Advertisement
Advertisement
ಮಗಳ ಮದುವೆಗೆಂದು ಇಲಿಯಾಸ್ ಬೇಗ್ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ಇರಿಸಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹೊರಗೆ ಹೋಗಿದ್ದಾಗ ತಜಮುಲ್ ತನ್ನ ಕೈಚಳಕ ತೋರಿಸಿದ್ದನು. ಮನೆಯ ನಕಲಿ ಕೀ ಬಳಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.50 ಲಕ್ಷ ರೂ. ನಗದನ್ನು ಕಳ್ಳ ಕದ್ದಿದ್ದನು.
Advertisement
ಮುಖಕ್ಕೆ ಮಾಸ್ಕ್, ಶಲ್ಯ ಧರಿಸಿ ಮನೆಗೆ ನುಗ್ಗಿ ತಜಮುಲ್ ಈ ಕಳ್ಳತನ ಮಾಡಿದ್ದಾನೆ. ತಜಮುಲ್ ಮನೆಗೆ ಬಂದು ಕಳ್ಳತನ ಮಾಡಿ ಹೋದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv