ಬೆಂಗಳೂರು: ವಿಧಾನಸಭೆ ಸಭಾಂಗಣದೊಳಗೆ ಟೀ ಕಾಫಿ ವ್ಯವಸ್ಥೆ ಮಾಡುವ ವಿಚಾರವಾಗಿ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ (Arvind Bellad) ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದ ಅರವಿಂದ ಬೆಲ್ಲದ್, ಅಧ್ಯಕ್ಷರೇ, ಸದನದ ಒಳಗೆ ಟೀ ಕಾಫಿ ವ್ಯವಸ್ಥೆ ಮಾಡುತ್ತೀರಿ ಎಂದು ವರದಿ ಬರುತ್ತಿದೆ, ಇದು ಬೇಡ, ಸರಿಯಲ್ಲ ಎಂದರು. ಆಗ ಸ್ಪೀಕರ್ (UT Khader) ತಿರುಗೇಟು ನೀಡಿ ಏನ್ರೀ, ಅದನ್ನ ಇಲ್ಲಿ ಚರ್ಚೆ ಮಾಡೋದಾ? ನನ್ನ ಕೊಠಡಿಗೆ ಬಂದು ಮಾತಾಡಿ. ಬೇಡ ಅಂದ್ರೆ ಬೇಡ, ಮುಗೀತು ಬಿಡಿ. ಕುಳಿತುಕೊಳ್ಳಿ ಎಂದು ಸೂಚಿಸಿದರು. ಇದನ್ನೂ ಓದಿ: ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ: ಸಿ.ಟಿ.ರವಿ
ಇನ್ನು ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೀಕರ್, ನಾನೊಬ್ಬ ಸಭಾಧ್ಯಕ್ಷನಾಗಿ ಶಾಸಕರಿಗೆ ವ್ಯವಸ್ಥೆ ಮಾಡೋದು ನನ್ನ ಕೆಲಸ. ಶಾಸಕರನ್ನ ವೈರಿಗಳಂತೆ ನೋಡಬೇಡಿ. ಶಾಸಕರು ಎಲ್ಲಾ ವಯಸ್ಸಿನವರು ಇದ್ದಾರೆ. ದೂರದ ಹೊಟೆಲ್, ಶಾಸಕರ ಭವನಕ್ಕೆ ಹೋಗಿ ರೆಸ್ಟ್ ತೆಗೆದುಕೊಳ್ಳುವ ಬದಲು ಇಲ್ಲಿಯೇ ವ್ಯವಸ್ಥೆ ಮಾಡಿದರೆ ಅನುಕೂಲ ಎಂದು ವ್ಯವಸ್ಥೆ ಮಾಡಿದ್ದೇವೆ. ಈ ವ್ಯವಸ್ಥೆಗೆ 4 ಲಕ್ಷ ಮೌಲ್ಯ ಆಗಬಹುದು, ದೊಡ್ಡ ಮಟ್ಟದ ಹಣ ಬೇಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ
224 ಶಾಸಕರ ಅನುಕೂಲಕ್ಕೆ 4 ಲಕ್ಷ ದೊಡ್ಡ ಮಟ್ಟದ ಖರ್ಚಲ್ಲ. ಎಲ್ಲರಿಗೂ ಲೆಕ್ಕ ಹಾಕಿದರೆ 2 ಸಾವಿರ ಬರಲ್ಲ. ಮಸಾಜ್ ಚೇರ್‌ಗೆ ಯಾವುದೇ ಖರ್ಚಿಲ್ಲ. ಬಿಜೆಪಿಯವರು ಕೂಡ ನಮ್ಮ ಸಭಾಂಗಣದಲ್ಲಿ ಹಾಕಿ ಎಂದು ಹೇಳಿದ್ರು. ಸೀಮಿತವಾಗಿ ಹಾಕಿಸಿದ್ದೇವೆ. ಟೀಕೆ ಮಾಡುವವರು ಇರುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸನಾತನ ಧರ್ಮದ ಕುರಿತ ಹೇಳಿಕೆ – ಉದಯನಿಧಿ ಸ್ಟಾಲಿನ್ ವಿರುದ್ಧ ಕೋರ್ಟ್ ಅನುಮತಿಯಿಲ್ಲದೇ ದೂರು ದಾಖಲಿಸುವಂತಿಲ್ಲ: ಸುಪ್ರೀಂ
ಸದನದಲ್ಲಿ ಹೆಚ್ಚಾಗಿ ಶಾಸಕರು ಪಾಲ್ಗೊಳ್ಳಲಿ ಎಂದು ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಸದನದ ಒಳಗೆ ಶಾಸಕರಿಗೆ ನೀರಿನ ವ್ಯವಸ್ಥೆ ಮಾಡಿದ್ದೇವೆ. ಟೀ- ಕಾಫಿ ವ್ಯವಸ್ಥೆ ಬಗ್ಗೆಯೂ ಚಿಂತಿಸಿದ್ದೇವೆ. ಶಾಸಕರಿಗೆ ಕ್ಲಬ್ ವ್ಯವಸ್ಥೆ ಬಗ್ಗೆ ಸಿದ್ಧತೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಕೆಲಸ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು